ದಾರಿ ತಪ್ಪಿದ ಬಾಲಕಿಯನ್ನು ಮನೆಗೆ ಕರೆದೊಯ್ಯುವುದಾಗಿ ನಂಬಿಸಿ ದೌರ್ಜನ್ಯ: ಯುವಕ ಸೆರೆ

ಕಣ್ಣೂರು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ದೌರ್ಜನ್ಯ ಗೈದ ಪ್ರಕರಣದಲ್ಲಿ ಯುವಕ ಸೆರೆಯಾಗಿದ್ದಾನೆ. ಕಣ್ಣೂರು ಪುನ್ನಾಡ್ ನಿವಾಸಿ ಪಿ.ಪಿ. ಶಾನಿಫ್ (32)ನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಪ್ರಕಾರ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಪ್ರಯಾಣ ಮಧ್ಯೆ ದಾರಿ ತಪ್ಪಿದ ಬಾಲಕಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಶಾನಿಫ್ ಕರೆದುಕೊಂಡು ಹೋಗಿದ್ದನು. ಬಳಿಕ ಜನವಾಸವಿಲ್ಲದ ಹಿತ್ತಿಲಿಗೆ ಕರೆ ದೊಯ್ದು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ.

ಮನೆಗೆ ತಲುಪಿದ ಬಾಲಕಿ ಹೆತ್ತವರಲ್ಲಿ ವಿಷಯ ತಿಳಿಸಿದ್ದು, ಆ ಬಳಿಕ ಮನೆ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ಹೇಳಿಕೆ ದಾಖಲಿಸಿದ ಬಳಿಕ ಯುವಕನನ್ನು ಸೆರೆ ಹಿಡಿಯಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಯುವಕನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

You cannot copy contents of this page