ಉಳ್ಳಾಲ ಸಮೀಪ ರೈಲು ಢಿಕ್ಕಿ ಹೊಡೆದು ಅಪರಿಚಿತ ಯುವಕ ಮೃತ್ಯು: ಸಂಚಾರ ವಿಳಂಬ

ತಲಪಾಡಿ: ಉಳ್ಳಾಲ ಸಮೀಪ ಅಪರಿಚಿತ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕಣ್ಣೂರು ಭಾಗಕ್ಕಿರುವ ರೈಲುಗಳು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿದೆ. ನಿನ್ನೆ ಸಂಜೆ ೫.೧೫ಕ್ಕೆ ಎಂಜಿಆರ್ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಢಿಕ್ಕಿ ಹೊಡೆದು 40 ವರ್ಷ ಪ್ರಾಯದ ಯುವಕ ಮೃತಪಟ್ಟಿದ್ದಾರೆ. ಆದರೆ ಇವರ ಗುರುತು ಹಚ್ಚಲಾಗಲಿಲ್ಲ. ಹಳಿಯಲ್ಲಿದ್ದ ಮೃತದೇಹವನ್ನು ತೆರವುಗೊಳಿಸಲು  ಪೊಲೀಸರು ವಿಳಂಬವಾಗಿ ತಲುಪಿದ ಕಾರಣ ರೈಲು ಸಂಚಾರ ವಿಳಂಬಗೊಂಡಿದೆ. ಮಂಗಳೂರು- ಕಣ್ಣೂರು ಪ್ಯಾಸೆಂಜರ್, ಮಾವೇಲಿ ಎಕ್ಸ್‌ಪ್ರೆಸ್, ಮಲಬಾರ್ ಎಕ್ಸ್‌ಪ್ರೆಸ್ ಎಂಬೀ ರೈಲುಗಳು ತಡವಾಗಿ ಸಂಚರಿಸಿವೆ. 6.30ರ ವೇಳೆ ಮಂಗಳೂರಿನಿಂದ ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿ ಕ್ರಮ ಕೈಗೊಂಡ ಬಳಿಕ 6.40ರ ವೇಳೆ ರೈಲು ಉಳ್ಳಾಲದಿಂದ ಪ್ರಯಾಣ ಆರಂಭಿಸಿದೆ.

RELATED NEWS

You cannot copy contents of this page