ಕುಂಬಳೆ: ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರಕ್ಕೇರುವುದ ರೊಂದಿಗೆ ಈ ಹಿಂದೆ ಇಡೀ ದೇಶಕ್ಕೇ ಮಾದರಿಯಾಗಿದ್ದ ಕೇರಳ ಪೊಲೀಸರು ಗೂಂಡಾ ಹಾಗೂ ಮಾಫಿಯಾಗಳಾಗಿ ಬದಲಾಗಿದ್ದಾರೆ ಎಂದು ಡಿಸಿಸಿ ಉಪಾಧ್ಯಕ್ಷ ಸಾಜಿದ್ ಮವ್ವಲ್ ಆರೋಪಿಸಿದ್ದಾರೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನಡೆಸಿದ ಪೊಲೀಸ್ ಠಾಣೆ ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪೊಲೀಸರು ಕಾನೂನು ವಿರುದ್ಧವಾಗಿ ವರ್ತಿಸುವುದನ್ನು ಕ್ಷುಲ್ಲಕವಾಗಿ ಕಾಣುವ ನೀತಿಯನ್ನು ಮುಖ್ಯಮಂತ್ರಿ ಸಹಿತ ಆಡಳಿತಾಧಿಕಾರಿಗಳು ಅನುಸರಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸದು. ಇದರ ವಿರುದ್ಧ ತೀವ್ರ ಚಳವಳಿ ನಡೆಸುವುದಾಗಿ ಸಾಜಿದ್ ಮವ್ವಲ್ ತಿಳಿಸಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬೇಬಿ ಪೂಜಾರಿ ಸ್ವಾಗತಿಸಿದರು. ನೇತಾರರಾದ ಮಂಜುನಾಥ ಆಳ್ವ, ಲಕ್ಷ್ಮಣ ಪ್ರಭು, ಲೋಕನಾಥ ಶೆಟ್ಟಿ, ಗಣೇಶ್ ಭಂಡಾರಿ, ನಾಸರ್ ಮೊಗ್ರಾಲ್, ಜುನೈದ್ ಉರ್ಮಿ, ಸುಲೈಮಾನ್ ಊಜಂಪದವು, ವಸಂತ ಮಾಸ್ತರ್, ರಾಘವೇಂದ್ರ ಭಟ್, ಶಾನಿದ್ ಕಯ್ಯಂಕೂಡ್ಲು,ಉಮೇಶ್ ಮಾಸ್ತರ್, ಪೃಥ್ವೀರಾಜ್ ಶೆಟ್ಟಿ, ಮೋಹನ ರೈ, ಡೋಲ್ಫಿನ್ ಡಿ’ಸೋಜಾ ಮೊದಲಾದವರು ಭಾಗವಹಿಸಿದರು. ರಿಯಾಸ್ ಕರೀಂ ವಂದಿಸಿದರು.
