ಉಪ್ಪಳ: ಉಪ್ಪಳ ಬಸ್ ನಿಲ್ದಾ ಣದಲ್ಲಿ ವಿವಿಧ ಸಮ ಸ್ಯೆಗಳು ತಲೆದೋರಿ ರುವಂತೆಯೇ ತ್ಯಾಜ್ಯ ರಾಶಿಯೂ ಸೇರಿ ದಾಗ ಅಸಹನೀಯ ಸ್ಥಿತಿ ನಿರ್ಮಾಣ ವಾಗಿದೆ. ಬಸ್ ನಿಲ್ದಾಣದ ಶೌಚಾ ಲಯ ಹಾಗೂ ಪರಿಸರದಲ್ಲಿ ತ್ಯಾಜ್ಯ ರಾಶಿ ಕಂಡುಬರು ತ್ತಿದ್ದು, ಇದರಿಂದ ದುರ್ವಾಸನೆ ಉಂಟಾಗಿ ನಿಲ್ದಾಣ ಪ್ರವೇಶಿಸುವುದೇ ಅಸಹನೀಯವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು ಇಲ್ಲಿ ತಂದು ಉಪೇಕ್ಷಿಸಲಾಗುತ್ತಿದ್ದು, ಶುಚೀಕರಿಸಲು ಮುಂದಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಶುಚೀಕರಿಸಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ವಿವಿಧ ಕಡೆಗಳಿಂದ ತ್ಯಾಜ್ಯವನ್ನು ತಂದು ಇಲ್ಲಿ ಉಪೇಕ್ಷಿಸುತ್ತಿರುವುದು ನಿತ್ಯ ಘಟನೆಯಾಗುತ್ತಿದೆಯೆಂದು ಸ್ಥಳೀಯರು ತಿಳಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
