ಕಾಸರಗೋಡು: ಆರು ತಿಂಗಳ ಹಿಂದೆ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿ ನೇಣು ಬಿಗಿದು ಸಾವಿಗೀಡಾಗಲು ಕಾರಣವೇನೆಂಬ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೆರಿಯ ಆಯಂಬಾರ ವಿಲ್ಲಾರಂಪದಿ ಕೊಳ್ಳಿಕ್ಕಾಲ್ನ ನಂದನ (21) ಎಂಬಾಕೆಯ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಂಗವಾಗಿ ನಂದನಳ ಫೋನ್ ಸೈಬರ್ ಸೆಲ್ನ ಸಹಾಯದೊಂದಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ನಂದಳ ಪತಿ ಬಾರ ಅರಮಂಗಾನ ಆಲಿಂಗಾಲ್ ತೊಟ್ಟಿಯಿಲ್ನ ರಂಜೇಶ್ ಹಾಗೂ ಆತನ ತಾಯಿಯನ್ನು ಮೇಲ್ಪರಂಬ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ನಂದನಳಿಗೆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರಲಿಲ್ಲವೆಂದು ಇವರು ಪೊಲೀಸರಲ್ಲಿ ತಿಳಿಸಿದ್ದಾರೆನ್ನಲಾಗಿದೆ. ಕಳೆದ ಆದಿತ್ಯವಾರ ಮಧ್ಯಾಹ್ನ ನಂದನ ಪತಿ ಮನೆಯ ಬೆಡ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪ ತ್ತೆಯಾಗಿದ್ದಳು.
