ಮಂಜೇಶ್ವರ: ವರ್ಕಾಡಿಯಲ್ಲಿ ಆಚಾರ್ಯ ವಿನೋಭಾ ಭಾವೆಯವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮ ಜರಗಿತು. ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಉದ್ಘಾಟಿಸಿ, ಮಾತನಾಡಿ, ವಿನೋಬಾ ಭಾವೆಯವರ ಭೂದಾನ ಚಳವಳಿಯಿಂದ ಪ್ರೇರಿತರಾಗಿ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಭೂ ಮಸೂದೆ ಕಾಯ್ದೆಯನ್ನು ಜ್ಯಾರಿಗೆ ತಂದಿರುವುದಾಗಿ ಅವರು ನುಡಿದರು. ವಿನೋಬಾ ವೆಂಕಟೇಶ ರಾವ್ ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದರು. ದಾಮೋದರ, ಪುರುಷೋತ್ತಮ ಅರಿಬೈಲು, ಹಮೀದ್ ಕಣಿಯೂರು, ಮಹಮ್ಮದ್ ಮಜಾಲು, ವಿನೋದ್ ಕುಮಾರ್ ಪಾವೂರು, ಅಜೀಜ್ ಕಲ್ಲೂರು, ರೋನಿ ಡಿಸೋಜ, ಗಂಗಾಧರ ಕೆ., ಶರ್ಮಿಳಾ ಪಿಂಟೊ, ಜಯಪ್ರಕಾಶ್ ಡಿಸೋಜಾ, ವೇದಾವತಿ ನೀರೊಳಿಕೆ, ಫಿಲೋಮಿನಾ ಮೊಂತೇರೊ, ಶೈಲಜಾ ಕಳಿಯೂರು, ರಾಜೇಶ್ ಡಿಸೋಜಾ, ಅಬೂಸಾಲಿ ಗಾಂಧಿನಗರ, ರಾಜೇಶ್ ಪಾಲೆಂಗ್ರಿ, ಹನೀಫ್ ಧರ್ಮನಗರ, ರಾಯಲ್ ಡಿಸೋಜಾ ಉಪಸ್ಥಿತರಿದ್ದರು.
