ಮಂಜೇಶ್ವರ: ಖತ್ತರ್ ದೇಶದ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣವನ್ನು ಖಂಡಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಮುಖಂಡ ಪ್ರಶಾಂತ್ ಕನಿಲ, ರೈತಸಂಘದ ಮುಖಂಡ ಕರುಣಾಕರ ಶೆಟ್ಟಿ ಮಾತನಾಡಿದರು. ವಿನಯಕುಮಾರ್ ಬಾಯಾರು ಸ್ವಾಗತಿಸಿದರು.
