ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಸ್ಥಾಪಿಸುವ ಟೋಲ್ ಬೂತ್‌ನ ವಿರುದ್ಧ ನಡೆಯುವ ಚಳವಳಿಯ ಮರೆಯಲ್ಲಿ ಕೋಮು ದ್ವೇಷ ಹುಟ್ಟಿಸಲು ಹಾಗೂ ಹಿಂದೂ ಸಮಾಜವನ್ನು ಅವಹೇಳನಗೈಯ್ಯಲು ಕೆಲವರು ಗೂಢ ಪ್ರಯತ್ನ ಆರಂಭಿಸಿ ರುವುದಾಗಿ ಆರೋಪಿಸಿ ಕುಂಬಳೆಯ ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ವಿಕ್ರಂ ಪೈ ಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಶೀಘ್ರ ಕೈಗೊಳ್ಳಬೇ ಕೆಂದು ಅವರು ಒತ್ತಾಯಿಸಿದ್ದಾರೆ. ಟೋಲ್ ಬೂತ್ ವಿರುದ್ಧದ ಚಳವಳಿ ಯಂಗವಾಗಿ ಹಿಂದೂ ಗಳನ್ನು ಕೊಳ್ಳೆ ಹೊಡೆಯುವವರಾಗಿ ಚಿತ್ರೀಕರಿಸುವ ಒಂದು ವಂಗ್ಯ ಚಿತ್ರವನ್ನು ಚಳವಳಿಗಾರರು ವ್ಯಾಪಕವಾಗಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರಪಡಿಸುತ್ತಿದ್ದಾ ರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಿಂದೂ ಸಮಾಜದವರ ವಸ್ತ್ರಧಾರಣೆ ರೀತಿಯಲ್ಲಿ ರಚಿಸಲಾದ ವ್ಯಂಗ್ಯಚಿತ್ರ ಗಳಲ್ಲಿ ಆ ರೀತಿಯ ಬಟ್ಟೆಬರೆ ಧರಿಸಿ ಹೆಗಲಲ್ಲಿ ಕೊಳ್ಳೆ ಹೊಡೆದ ಹಣವನ್ನು ಬಚ್ಚಿಡಲಿರುವ ದಂಡ, ಕೈಯಲ್ಲಿ ಖಡ್ಗ ಹಿಡಿದು ವಾಹನ ತಡೆದುನಿಲ್ಲಿಸಿ ಪ್ರಯಾಣಿಕರ ಕುತ್ತಿಗೆಗೆ ಚಾಕು ಇರಿಸಿ ಹಣ ಅಪಹರಿಸಿ ಬಚ್ಚಿಡುವ ರೀತಿಯಲ್ಲಿ ವ್ಯಂಗ್ಯಚಿತ್ರ ರಚಿಸಲಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ವ್ಯಂಗ್ಯ ಚಿತ್ರದ ಪ್ರತಿಯನ್ನು ದೂರಿನೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕವಾಗಿರುವ ಒಗ್ಗಟ್ಟು, ಸೌಹಾರ್ದತೆಯನ್ನು ಇಲ್ಲದಾಗಿಸಲು ಹಾಗೂ ಕೋಮುಗಲಭೆ ಸೃಷ್ಟಿಸಲಿ ರುವ ಗೂಢತಂತ್ರ ಇದಾಗಿದೆ ಯೆಂದು ದೂರಿನಲ್ಲಿ ತಿಳಿಸಲಾಗಿದೆ. ಚಟುವಟಿಕೆ ಆರಂಭಿಸದಿರುವ ಹಾಗೂ ಕಾನೂನುಕ್ರಮ ಮುಂದುವರಿಯುತ್ತಿರುವ ಟೋಲ್ ಬೂತ್‌ನ ಮರೆಯಲ್ಲಿ ನಡೆಯುವ ಈ ರೀತಿಯ ಬೆಳವಣಿಗೆಗಳನ್ನು ಗಂಭೀರವಾಗಿ ಕಾಣಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.