ಕುಂಬಳೆ: ಅನಧಿಕೃತವಾಗಿ ಕೆಂಪು ಮಣ್ಣು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಕುಂಬಳೆ ಎಸ್ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂರು ಲಾರಿಗಳ ಚಾಲಕರನ್ನು ಕಸ್ಟಡಿಗೆ ತೆಗೆಯಲಾಗಿದೆ. ಕುಂಟಂಗೇರಡ್ಕ ನಿವಾಸಿ ಪಸಲ್ (36), ಬಂಬ್ರಾಣದ ತಸ್ರೀಫ್ (25), ಕಳತ್ತೂರಿನ ಅಬ್ದುಲ್ಲ (23) ಎಂಬಿವರು ಕಸ್ಟಡಿಯಲ್ಲಿರುವ ಲಾರಿ ಚಾಲಕರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ರಾತ್ರಿ ಪೇರಾಲ್ ಕಣ್ಣೂರಿನಿಂದ ಕೆಂಪು ಮಣ್ಣು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್ಐ ನೇತೃತ್ವದಲ್ಲಿ ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಕೆಂಪು ಮಣ್ಣು ಸಾಗಾಟ ಪತ್ತೆಯಾಗಿದೆ.
