ಕಾಸರಗೋಡು: ಪತ್ನಿಗೆ ಇರಿದು ಗಾಯಗೊಳಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುತ್ತಿಕ್ಕೋಲು ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಕುತ್ತಿಕ್ಕೋ ಲು ಪಯಂದಗಾನಂ ನಿವಾಸಿಯೂ ಕುತ್ತಿಕ್ಕೋಲ್ನಲ್ಲಿ ಆಟೋ ಚಾಲಕನಾಗಿರುವ ಸುರೇಶ್ (51) ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ 8.15ರ ವೇಳ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಸುರೇಶ್ ಪತ್ನಿ ಸಿನಿ (41)ಗೆ ಇರಿದು ಗಾಯಗೊಳಿಸಿದ ಬಳಿಕ ಮನೆಯ ಸ್ಟೇರ್ ಕೇಸ್ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
