ವಿವಿಧ ಶಾಲೆಗಳಲ್ಲಿ ಸಂದರ್ಶನ

ಅಂಗಡಿಮೊಗರು: ಇಲ್ಲಿನ ಜಿಎಚ್ಎಸ್ಎಸ್ನ ಎಚ್ಎಸ್ಟಿ ಪೊಲಿಟಿಕಲ್ ಸಯನ್ಸ್ (ಜ್ಯೂನಿಯರ್) ವಿಭಾಗದಲ್ಲಿ ಅಧ್ಯಾಪಕ ನೇಮಕಾತಿ ನಡೆಸುವುದಕ್ಕೆ ಸಂದರ್ಶನ ಈ ತಿಂಗಳ 17ರಂದು ಬೆಳಿಗ್ಗೆ 11 ಗಂಟೆಗೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯಲಿದೆ. 9446461450ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.
ಮೂಡಂಬೈಲು: ಜಿಎಚ್ಎಸ್ ಮೂಡಂಬೈಲುನಲ್ಲಿ ಖಾಲಿ ಇರುವ ಎಲ್ಪಿಎಸ್ಟಿ ಕನ್ನಡ ಹುದ್ದೆ ಭರ್ತಿಗೊಳಿಸಲು ಈ ತಿಂಗಳ 15ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಯುಪಿಎಸ್ಟಿ ಮಲೆಯಾಳ, ಜಿಲ್ಲಾ ಪಂಚಾಯತ್ ಪ್ರತ್ಯೇಕ ಯೋಜನೆ ಪ್ರಕಾರ ನೇಮಕ ಮಾಡುವ ಕ್ರೀಡಾ ಅಧ್ಯಾಪಕರ ಒಂದು ಹುದ್ದೆಗೆ ಭರ್ತಿಗೊಳಿಸುವುದಕ್ಕೆ ಸಂದರ್ಶನ ಈ ತಿಂಗಳ 15ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಅರ್ಹರು ಭಾಗವಹಿಸಬಹುದು. ಇದೇ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಖಾಲಿ ಇರುವ ಮಲೆಯಾಳ, ಕಾಮರ್ಸ್ ವಿಷಯಗಳ ಅಧ್ಯಾಪಕರನ್ನು ಭರ್ತಿಗೊಳಿಸಲು ಈ ತಿಂಗಳ 16ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

You cannot copy contents of this page