ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮುಖಮಂಟಪ ಲೋಕಾರ್ಪಣೆ, ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಾಳೆ

ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನೂತನ ಮುಖಮಂಟಪ ಲೋಕಾರ್ಪಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸರ್ಧೆಗಳು ಜರಗಲಿವೆ. ನಾಳೆ ಬೆಳಿಗ್ಗೆ 7ರಿಂದ ಸಂಗೀತಾರ್ಚನೆ, 8 ಗಂಟೆಗೆ ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅವರಿಂದ ದೀಪಪ್ರಜ್ವಲನೆ, 8.30ಕ್ಕೆ ಪೂಜೆ, 8.35ರಿಂದ ಚಪ್ಪರ ಮದುವೆ, 8.40ರಿಂದ ತುಳಸಿಹಾರ ನೇಯುವ ಸ್ಪರ್ಧೆ ಮಹಿಳೆಯರಿಗೆ, 8.50ರಿಂದ ಮೊಸರುಕುಡಿಕೆ ಶಾಸ್ತಿçಯ ಪ್ರಸ್ತುತಿ, 9ರಿಂದ ವಿವಿಧ ಭಜನಾ ತಂಡಗಳಿAದ ಭಜನೆ, ಪಾಂಚಜನ್ಯ ಸಾಂಸ್ಕೃತಿಕ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ, ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅವರಿಂದ ಉದ್ಘಾಟನೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಉದಯ ಭಟ್ ಕೋಳಿಕ್ಕಜೆ, ನಿವೃತ್ತ ಮುಖ್ಯೋಪಾಧ್ಯಾಯ ಸುವರ್ಣ ಮಾಸ್ತರ್ ಅಗಲ್ಪಾಡಿ, ಧಾರ್ಮಿಕ ಮುಂದಾಳು ಐತ್ತಪ್ಪ ಮವ್ವಾರು, ಯಕ್ಷಪೋಷಕ ರವೀಂದ್ರನಾಥ ಭಂಡಾರಿ ನಾರಂಪಾಡಿ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ಮಾಸ್ತರ್ ಪೆರಡಾಲ ಉಪಸ್ಥಿತರಿರುವರು. 9.30ರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, 11 ಗಂಟೆಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀ ಮಂದಿರಕ್ಕೆ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಶೋಭಾಯಾತ್ರೆ, 11ರಿಂದ ಭಕ್ತಿಭಾವ ಗಾನಯಾನ, 12ರಿಂದ ಗಾನ ಮಾಧುರ್ಯಂ, ಮಧ್ಯಾಹ್ನ ಮಹಾಪೂಜೆ. ಅಪರಾಹ್ನ 2ರಿಂದ ಧಾರ್ಮಿಕ ಸಭೆ ನಡೆಯಲಿದೆ. ಜನ್ಮಾಷ್ಟಮಿ ಮತ್ತು ಮುಖಮಂಟಪ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸುವರು.
ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಉದ್ಘಾಟಿ ಸುವರು. ವಕೀಲ ಸಂಕಪ್ಪ ಪೂಜಾರಿ ಉಡುಪಿ, ಶಂಕರ ಭಟ್ ಮಂಗಳೂರು, ಉದ್ಯಮಿ ಶಿವಶಂಕರ ನೆಕ್ರಾಜೆ, ಡಾ| ಮನೋಹರ್ ಎಂ.ಜಿ. ಮುಳ್ಳೇರಿಯ, ನಿವೃತ್ತ ಡೆಪ್ಯೂಟಿ ಸೂಪರಿಡೆಂಟ್ ಪೊಲೀಸ್ ಕೆ.ಪಿ. ಮೋಹನ್‌ದಾಸ್, ಈಶ್ವರಿ ಬೇರ್ಕಡವು, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಚಂದ್ರಶೇಖರ್ ಎ.ಎಸ್.ಐ. ಮಂಗಳೂರು, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಲವರು ಭಾಗವಹಿಸುವರು. ಸಂಜೆ 5ರಿಂದ ಗಾನ ಸಂಭ್ರಮ, 6.30ರಿಂದ ನೃತ್ಯ ಕೃಷ್ಣಂ, 8ರಿಂದ ಯೋಗಾಸನಾ ಪ್ರಸ್ತುತಿ, 8.30ರಿಂದ `ನಾಟ್ಯರಂಜನಾ’, 9 ಗಂಟೆಯಿAದ ಯಕ್ಷಗಾನ ಬಯಲಾಟ, 10.30ಕ್ಕೆ ಮಹಾಪೂಜೆ ನಡೆಯಲಿದೆ.

You cannot copy contents of this page