ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದೇ ವೇಳೆ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂ ದಾಗಿ ಮಂಜೇಶ್ವರ, ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳು ಸಂಚಾರ ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಯೆಂದು ನಾಗರಿಕರು ಆರೋಪಿಸುತ್ತಿ ದ್ದಾರೆ. ಈ ಕಡೆ ೫೦೦ಕ್ಕೂ ಹೆಚ್ಚು ಮನೆಗಳಿದ್ದು, ಕಾಸರಗೋಡು, ಕುಂಬಳೆ, ಉಪ್ಪಳದಿಂದ ಚೆಕ್ ಪೋಸ್ಟ್‌ಗೆ ಬರುವವರು ಹೊಸಂಗಡಿ ಅಂಗಡಿಪದವು ಆಗಿ ನಾಲ್ಕು ಕಿಲೋ ಮೀಟರ್ ಸುತ್ತಿ ಸಂಚರಿಸಿ ತಮ್ಮ ಮನೆಗಳಿಗೆ ಬರುವ ಸ್ಥಿತಿ ಉಂಟಾಗಿದೆ. ತಲಪಾಡಿಯಿಂದ ಮಂಜೇ ಶ್ವರದವರೆಗೆ ೪ ಕಡೆ ಫೂಟ್ ಓವರ್ ಬ್ರಿಡ್ಜ್ ಮಾಡಿಕೊಟ್ಟರೂ ಇಲ್ಲಿಯ ಜನರಿಗೆ ಈ ಭಾಗ್ಯ ಇಲ್ಲದಂತಾಗಿದೆ. ಕಾಸರಗೋಡು ಕಡೆ ಯಿಂದ ಬರುವ ಸರ್ವಿಸ್ ರಸ್ತೆ ಉಪ್ಪಳ ಪೆಟ್ರೋಲ್ ಪಂಪ್ ವರೆಗೆ ಮಾತ್ರ ಇದ್ದು ಅಲ್ಲಿಂದ ಚೆಕ್‌ಪೋಸ್ಟ್ ವರೆಗೆ ಸರ್ವೀಸ್ ರೋಡ್ ನಿರ್ಮಿಸಲಾಗಿಲ್ಲ. ತಲಪಾಡಿ ಯಿಂದ ಹೊಸಂಗಡಿ ಚೆಕ್‌ಪೋಸ್ಟ್ ವರೆಗೆ ಸರ್ವೀಸ್ ರೋಡ್ ಇದ್ದರೂ ಚೆಕ್‌ಪೋಸ್ಟ್‌ನಿಂದ ಉಪ್ಪಳ ಪೆಟ್ರೋಲ್ ಪಂಪ್‌ವರೆಗೆ ಸರ್ವೀಸ್ ರೋಡ್ ನಿರ್ಮಾಣವಾಗಿಲ್ಲ. ಉಪ್ಪಳ ಹೊಳೆಗೆ ಸರ್ವೀಸ್ ರೋಡ್ ನಿರ್ಮಿಸಬೇಕಾದರೆ ಅಲ್ಲಿ ಸೇತುವೆ ಕಾಮಗಾರಿ ಆಗಬೇಕು. ಇಲ್ಲಿ ಸೇತುವೆ ನಿರ್ಮಿಸಲಾಗಿಲ್ಲ. ಕಾಸರಗೋಡು ಭಾಗಕ್ಕೆ ಹೋಗಲು ತ್ರಿಪಥ ರಸ್ತೆ ಇದ್ದು ಕಾಸಗರೋಡು ಕಡೆಯಿಂದ ಬರುವವರು ಹಳೆ ಸೇತುವೆ ಮೂಲಕ ಬರಬೇಕಾಗಿದೆ. ಇಲ್ಲಿ ಮೊದಲಿನ ಹಳೆ ಸೇತುವೆಯನ್ನೇ ಉಪಯೋಗಿಸುತ್ತಿದ್ದು ಇಲ್ಲಿ ಹೊಸ ಸೇತುವೆ ಮೂಲಕ ಬರಬೇಕಾಗಿದೆ. ಇಲ್ಲಿ ಮೊದಲಿನ ಹಳೆ ಸೇತುವೆಯನ್ನೇ ಉಪಯೋಗಿಸುತ್ತಿದ್ದು, ಇಲ್ಲಿ ಹೊಸ ಸೇತುವೆ ನಿರ್ಮಿಸಲಾಗಿಲ್ಲ. ಹಳೆ ಸೇತುವೆ ದ್ವಿಪಥ ರಸ್ತೆಯಾಗಿದ್ದು, ಕಳೆದ ಕೆಲವು ಸಮಯದಿಂದ ಇಲ್ಲಿ ಅಪಘಾತ ಸಂಭವಿಸುತ್ತಿದೆ.
ಆದುದರಿಂದ ಇಲ್ಲಿಯ ನಿವಾಸಿ ಗಳಿಗೆ ಉಪ್ಪಳ ಪೆಟ್ರೋಲ್ ಪಂಪ್‌ನಿಂದ ಚೆಕ್‌ಪೋಸ್ಟ್ ವರೆಗೆ ಸರ್ವೀಸ್ ರೋಡ್ ನಿರ್ಮಿಸಿ ಸಂಚಾರ ಸಮಸ್ಯೆ ಮಾಡಬೇಕಾಗಿದೆ. ಜನರು ಆ ಕಡೆಯಿಂದ ಈ ಕಡೆಗೆ ರಸ್ತೆ ದಾಟಲು ಕೂಡಾ ಪರ್ಯಾಯ ವ್ಯವಸ್ಥೆ ಏರ್ಪಡಿಸಬೇಕು. ಈ ಸಂಕಷ್ಟ ನಿವಾರಣೆ ಆಗಬೇಕಾದರೆ ಒಂದು ಕಡೆ ಸರ್ವೀಸ್ ರಸ್ತೆ ಮತ್ತು ಜನರಿಗೆ ರಸ್ತೆ ದಾಟಲು ಫೂಟ್ ಓವರ್ ಬ್ರಿಡ್ಜ್ ಅವಶ್ಯಕತೆ ಇದೆ. ಶಾಸಕರನ್ನು ಸಂಪರ್ಕಿಸಿದಾಗ ಚಾಲ್ತಿಯಲ್ಲಿ ಇರುವ ಕಾಮಗಾರಿ ಮುಗಿದ ನಂತರ ಸರ್ವೀಸ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ವಿಷಯದಲ್ಲಿ ಕಾಸರಗೋಡು ಸಂಸದರನ್ನು ಕೂಡಾ ಸಂಪರ್ಕಿಸಿ ಅವರಿಗೆ ಈ ವಿಷಯದಲ್ಲಿ ಜನರ ಸಂಕಷ್ಟವನ್ನು ನಿವಾರಿಸಲು ವಿನಂತಿಸಲಾಗಿದೆ. ಶಾಸಕರು ಮತ್ತು ಸಂಸದರು ಈ ಕಡೆ ಗಮನ ಹರಿಸಿ ಇಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.