ಕುಂಬಳೆ: ಯುವಕನೋರ್ವ ನಿಗೆ ಇರಿದು ಗಾಯಗೊಳಿಸಿದ ಘಟನೆ ನಡೆ ದಿದೆ. ಆರಿಕ್ಕಾಡಿ ಓಲ್ಡ್ ರೋಡ್ನ ಕ್ವಾರ್ಟರ್ಸ್ನಲ್ಲಿ ವಾಸಿಸುವ ಅಬೂಬಕ್ಕರ್ ಸಿದ್ದಿಕ್ (33) ಇರಿತದಿಂದ ಗಾಯಗೊಂ ಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಆರಿಕ್ಕಾಡಿ ಕುನ್ನಿಲ್ ಎಂಬಲ್ಲಿನ ಅಂಗಡಿಯ ಮುಂದೆ ಅಂಗಡಿ ಮಾಲಕ ಮುನೀರ್ ಎಂಬಾತ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಕೂಡಲೇ ಅಬೂಬಕರ್ ಸಿದ್ದಿಕ್ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
