ಕುಂಬಳೆ: ಬಂಬ್ರಾಣ ನಿವಾಸಿ ಬಿ. ಬಾಲಕೃಷ್ಣ ಶೆಟ್ಟಿ (56) ಎಂಬವರು ನಿಧನಹೊಂದಿದರು. ಇವರು ಕೇರಳ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿ ದ್ದಾರೆ. ಕಿಡ್ನಿ ಸಂಬಂಧ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ನಿನ್ನೆ ಇವರಿಗೆ ಹೃದಯಾಘಾತವುಂಟಾಗಿದ್ದು, ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಚಿತ್ರ, ಶ್ರುತಿ, ಧನ್ಯಶ್ರೀ, ಅಳಿಯ ನವೀನ್‌ಚಂದ್ರ ಆಳ್ವ, ಸಹೋದರ-ಸಹೋದರಿಯರಾದ ಗಂಗಾಧರ ಶೆಟ್ಟಿ, ಶಿವರಾಮ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ವಸಂತ ಶೆಟ್ಟಿ ಈ ಹಿಂದೆ ನಿಧನಹೊಂದಿದ್ದಾರೆ.