ಹಿರಿಯ ಹೋಟೆಲ್ ಮಾಲಕ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಬಳಿ ಲಕ್ಷ್ಮೀ ನಿವಾಸದ ಕೆ. ಜಯನ್ (70) ಎಂಬವರು ನಿಧನ ಹೊಂದಿದರು. ಇವರು ಹಿರಿಯ ಹೋಟೆಲ್ ಮಾಲಕನಾಗಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಅಭಿಜಿತ್, ಶೋಭಿತ್ (ಕುವೈತ್),  ಸ್ನೇಹ, ಅಳಿಯ- ಸೊಸೆಯಂದಿರಾದ ಸುಭಿತ್, ಮಂಜುಷ, ಮಾನಸ, ಸಹೋದರ ಮಾಧವ ತಲಪಾಡಿ, ಸಹೋದರಿ ಬೇಬಿ ದೇರಳಕಟ್ಟೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋ ದರರಾದ ನಾರಾಯಣ, ಗಂಗಾಧರ, ಸಹೋದರಿಯರಾದ ಲಲಿತ, ಸುಮತಿ ಎಂಬವರು ಈ ಹಿಂದೆ ನಿಧನ ಹೊಂದಿ ದ್ದಾರೆ. ಜಯನ್‌ರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ ಪಳ್ಳಂ ಸ್ಮಶಾನದಲ್ಲಿ ನಡೆಯಲಿದೆ ಯೆಂದು ಸಂಬಂಧಿಕರು ತಿಳಿಸಿದ್ದಾರೆ.

You cannot copy contents of this page