ಪೈವಳಿಕೆ ಪಂಚಾಯತ್ 8ನೇ ವಾರ್ಡ್ ಬಿಜೆಪಿ ಸಮಾವೇಶ

ಪೈವಳಿಕೆ: ಪಂಚಾಯತ್‌ನ 8ನೇ ವಾರ್ಡ್ ಬೆರಿಪದವು ಸಮ್ಮೇಳನವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು. ಸೌಲಭ್ಯ ವಂಚಿತ ಪೈವಳಿಕೆ ಪಂಚಾಯತ್ ಅಭಿವೃದ್ಧಿಶೂನ್ಯವಾಗಿದೆ ಎಂದು ಇದಕ್ಕೆ ಇಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಕಾರಣವೆಂದು ಅವರು ದೂರಿದರು. ಬೂತ್ ಸಮಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪಂ. ಸದಸ್ಯೆ ಜಯಲಕ್ಷ್ಮಿ ಭಟ್, ಮಂಡಲ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್, ನೋರ್ತ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ ಉಪಸ್ಥಿತರಿದ್ದರು.

RELATED NEWS

You cannot copy contents of this page