ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ನಿನ್ನೆ ಇರಾ ಸಭಾಭವನದಲ್ಲಿ ಜರಗಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿದರು. ಹಿರಿಯ ವ್ಯಾಪಾರಿ ಪಾಂಡುರಂಗ ಪ್ರಭು ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ದಿನೇಶ್ ಮುಖ್ಯ ಅತಿಥಿಯಾಗಿದ್ದರು.
ಉದ್ಯಮಿ ಹರೀಶ್ ರೈ ಪುತ್ರಕಳ, ಪ್ರತಿಭೆ ಪ್ರವಿಶಾ ಪೊಡಿಪ್ಪಳ್ಳರನ್ನು ಅಭಿನಂದಿಸಲಾಯಿತು. ರಮಾನಾಥ ರೈ, ರವಿ ನವಶಕ್ತಿ, ರತ್ನಾಕರ ಒಡಂಗಲ್ಲು, ತಾರನಾಥ ರೈ, ಬ್ರಯಾನ್, ಉಮೇಶ್ ರೈ, ಹನೀಫ್ ಉಪಸ್ಥಿತರಿದ್ದರು. ದಯಾನಂದ ರೈ ಸ್ವಾಗತಿಸಿ, ಸತೀಶ್ ವಂದಿಸಿದರು.
ಅಖಿಲೇಶ್ ನಗುಮುಗಂ ನಿರೂಪಿಸಿದರು. ತಿರುವಾದಿರ ಕಳಿ, ಲಿಂಬೆ ಚಮಚ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಹೂರಂಗೋಲಿ, ಓಣಂ ಔತಣಕೂಟ ಏರ್ಪಡಿಸಲಾಗಿತ್ತು.