ರೇಶನ್ ಅಂಗಡಿಗಳನ್ನು ಮಿನಿ ಮಾವೇಲಿ ಸ್ಟೋರ್‌ಗಳನ್ನಾಗಿಸುವ ಯೋಜನೆ ಪರಿಗಣನೆ

ಕಾಸರಗೋಡು: ರೇಶನ್ ಅಂಗಡಿ ಗಳನ್ನು ಮಿನಿ ಮಾಲೇಲಿ ಸ್ಟೋರ್‌ಗಳನ್ನಾ ಗಿಸುವ ಯೋಜನೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರಿಗಣನೆಯಲ್ಲಿದೆ. ಹೀಗೆ ರೇಶನ್ ಅಂಗಡಿಗಳನ್ನು ಮಿನಿ ಮಾವೇಲಿ ಸ್ಟೋ ರ್‌ಗಳಾಗಿ ಪರಿವರ್ತಿಸಿದಲ್ಲಿ ರೇಶನ್ ಸಾಮಗ್ರಿಗಳ ಹೊರತಾಗಿ ಇತರ ನಿತ್ಯೋ ಪಯೋಗಿ ಸಾಮಗ್ರಿಗಳು ಇದೇ ಕೇಂದ್ರ ದಲ್ಲಿ  ರಿಯಾಯಿತಿ ಬೆಲೆಗೆ ಲಭಿಸಲಿದೆ.

ಸಪ್ಲೈಕೋದ ಸೇವೆಗಳು ಜನರಿಗೆ ಇನ್ನಷ್ಟು ವ್ಯಾಪಕವಾಗಿ ಲಭಿಸುವಂತೆ ಮಾಡುವುದರ ಜೊತೆಗೆ ರೇಶನ್ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯ ವನ್ನು ಖಚಿತಪಡಿಸುವುದೇ ಈ ಹೊಸ ಯೋಜನೆಯ ಪ್ರಧಾನ ಉದ್ದೇಶವಾಗಿ ದೆಯೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಂತೆ ಸಪ್ಲೈಕೋ ಸಾಮಗ್ರಿಗಳನ್ನು ಮಾರಾಟ ಮಾಡಲು ಮುಂದಾಗುವ ರೇಶನ್ ಅಂಗಡಿಗಳು ಅದಕ್ಕಿರುವ ಸೌಕರ್ಯ ಗಳನ್ನು ಏರ್ಪಡಿಸಿದಲ್ಲಿ  ಅಂತಹ ರೇಶನ್ ಅಂಗಡಿಗಳಿಗೆ ಸಪ್ಲೈಕೋ ಸಾಮಗ್ರಿಗಳನ್ನು ಮಾರಾಟಕ್ಕಾಗಿ  ಸಪ್ಲೈಕೋ ನೇರವಾಗಿ ಪೂರೈಸಲಿದೆ. ಆದರೆ  ಸಪ್ಲೈಕೋದಿಂದ ಖರೀದಿಸುವ ಸಾಮಗ್ರಿಗಳಿಗೆ ರೇಶನ್ ಅಂಗಡಿಗಳು ಮುಂಗಡವಾಗಿ ಹಣ ಪಾವತಿಸಬೇ ಕಾಗಿಲ್ಲ. ಸಾಮಗ್ರಿಗಳ ಮಾರಾಟವಾದ ಬಳಿಕ ಅದರ ಹಣವನ್ನು ಸಪ್ಲೈಕೋಗೆ ಪಾವತಿಸಿದರೆ ಸಾಕಾಗಬಹುದಾಗಿದೆ. ಸಪ್ಲೈಕೋದ ಸಬ್ಸಿಡಿ ಸಾಮಗ್ರಿಗಳನ್ನೂ ರೇಶನ್ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುವುದು. ತೆರೆದ ಮಾರುಕಟ್ಟೆಗಳಲ್ಲಿ ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರ ಇಂತಹ ಹೊಸ ಕ್ರಮಕ್ಕೆ ಮುಂದಾಗಿದೆ.

RELATED NEWS

You cannot copy contents of this page