ಕಾಸರಗೋಡು: ರಾಜ್ಯದಲ್ಲಿ ಅಪಘಾತಕ್ಕೊಳ ಗಾಗುವ ವಾಹನಗಳಲ್ಲಿ ಬಹುಪಾಲು ದ್ವಿಚಕ್ರ ವಾಹನಗಳೇ ಆಗಿವೆ. ಇದರಲ್ಲಿ ಬೈಕ್ ಮತ್ತು ಸ್ಕೂಟರ್ಗಳು ಒಳಗೊಂಡಿವೆ.
ಕಳೆದ ವರ್ಷ ರಾಜ್ಯದಲ್ಲಿ 16,108 ವಾಹನ ಅಪಘಾತ ಗಳು ಉಂಟಾಗಿದ್ದು ಇದರಲ್ಲಿ ಬಹುಪಾಲು ದ್ವಿಚಕ್ರ ವಾಹನ ಗಳೇ ಆಗಿವೆ. ಈ ಅಪಘಾತದಲ್ಲಿ 1237 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. 11,374 ಮಂದಿ ಗಂಭೀರ ಗಾಯಗೊಂಡಿದ್ದಾರೆ. 3497 ಮಂದಿ ಸಣ್ಣಪುಟ್ಟ ಗಾಯ ಗೊಂಡಿದ್ದಾರೆ. ಹೀಗೆ ಕಳೆದ ವರ್ಷ ನಡೆದ ಅಪಘಾತ ಕ್ಕೊಳಗಾದ ವಾಹನಗಳಲ್ಲಿ 5892 ದ್ವಿಚಕ್ರ ವಾಹನಗಳು ಒಳಗೊಂಡಿವೆ. ಇದರಲ್ಲಿ 68 ದ್ವಿಚಕ್ರ ಸವಾರರು ಸಾವನ್ನಪ್ಪಿ ದ್ದಾರೆ. 480 ಮಂದಿ ಗಂಭೀರ ಹಾಗೂ 215 ಮಂದಿ ಸಣ್ಣ ಪುಟ್ಟ ಗಾಯಗೊಂಡಿದ್ದಾರೆAದು ಸಂಬAಧಪಟ್ಟ ವರದಿಗಳು ಸೂಚಿಸುತ್ತವೆ. ಸಂಚಾರದ ವೇಳೆ ಹೆಲ್ಮೆಟ್ ಧರಿಸಿದವರೂ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವನ್ನಪ್ಪಿ ದವರಲ್ಲಿ ಒಳಗೊಂಡಿದ್ದಾರೆ.
