ಕಾಲುದಾರಿಗಾಗಿ ಗುಡ್ಡೆ ಕೊರೆತ: ಕಲ್ಲಂಗೈಯಲ್ಲಿ ಚಟುವಟಿಕೆರಹಿತವಾದ ಶಾಲಾ ಕಟ್ಟಡ ಹೆದ್ದಾರಿಗೆ ಕುಸಿಯುವ ಭೀತಿ

ಮೊಗ್ರಾಲ್ ಪುತ್ತೂರು: ಯಾವುದೇ ನಿಮಿಷದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕುಸಿದು ಬೀಳಬಹುದು ಎಂಬ ಭೀತಿಯಲ್ಲಿರುವ ಕಲ್ಲಂಗೈ ಎಎಲ್‌ಪಿ ಶಾಲೆಯನ್ನು ಮುರಿದು ತೆಗೆಯಲು ಶಾಲಾ  ಅಧಿಕಾರಿಗಳು ಕ್ರಮ ಸ್ವೀಕರಿಸ ಬೇಕೆಂದು ಬೇಡಿಕೆ ಮೂಡಿ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯಲ್ಲೇ ನಿರ್ಮಿಸುವ ಕಾಲುದಾರಿಗೆ ಬೇಕಾಗಿ ರಸ್ತೆ ನಿರ್ಮಾಣ ಕಂಪೆನಿ ಅಧಿಕಾರಿಗಳು ಮಣ್ಣು ಕೊರೆದಾಗ ಈ ಭಾಗದಲ್ಲಿ ಗುಡ್ಡೆ ಕುಸಿತ ಉಂಟಾಗಿದ್ದು, ಇದು ಶಾಲಾ ಕಟ್ಟಡಕ್ಕೆ ಬೆದರಿಕೆ ಸೃಷ್ಟಿಸಿದೆ. ಕಟ್ಟಡ ಯಾವುದೇ ಕ್ಷಣ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಾರಣ ಈ ಶಾಲೆಗೆ ಅಧಿಕಾರಿಗಳು ಕಾರ್ಯಾಚರಣೆ ಅವಕಾಶ ನೀಡಲಿಲ್ಲ. ಆದ್ದರಿಂದ ಈ ಮೊದಲೇ ತರಗತಿಗಳನ್ನು ಇಲ್ಲಿಂದ ಸ್ಥಳಾಂತರಿಸಲಾದ ಕಾರಣ ಶಾಲಾ ಕಟ್ಟಡ ಖಾಲಿಯಾಗಿದೆ. ಇದಕ್ಕೆ ಬದಲಾಗಿ ಹೊಸ ಕಟ್ಟಡ ನಿರ್ಮಿಸಲಾ ಯಿತಾದರೂ ಹಳೆಯ ಹೆಂಚು ಹಾಸಿದ ಕಟ್ಟಡ ಈಗಲೂ ಇಲ್ಲಿದ್ದು, ಇದು ರಾಷ್ಟ್ರೀಯ ಹೆದ್ದಾರಿಗೆ ಕುಸಿಯಬಹು ದೆಂಬ ಭೀತಿ ಉಂಟಾ ಗಿದೆ. ಶಾಲಾ ಮಕ್ಕಳು ಆಟವಾಡುತ್ತಿ ರುವುದು ಈ ಕಟ್ಟಡದ ಪರಿಸರದಲ್ಲೇ ಆಗಿದ್ದು, ಅಧ್ಯಾಪಕರು ಹಾಗೂ ಹೆತ್ತವರಿಗೆ ಇದು ಆತಂಕ ಹೆಚ್ಚಿಸಿದೆ. 300ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಸರ್ವೀ ಸ್ ರಸ್ತೆಯ ಬದಿ ಕಟ್ಟಡ ನೆಲೆಗೊಂ ಡಿದೆ.  ಕಟ್ಟಡಕ್ಕೆ ಬೆದರಿಕೆಯಾಗುವ ರೀತಿಯಲ್ಲಿ ನಿರ್ಮಾಣ ಕಂಪೆನಿ ಅಧಿಕಾರಿಗಳು ಮಣ್ಣು ಕೊರೆದಿದ್ದರು. ಆದುದರಿಂದ ಕಟ್ಟಡ ಅಪಘಾತ ಬೆದರಿಕೆ ಸೃಷ್ಟಿಸಿದೆ ಎಂದು ಇಲ್ಲಿ ನೋಡಿದರೆ ತಿಳಿದು ಬರುತ್ತದೆ.

ರಾಷ್ಟ್ರೀಯ ಹೆದ್ದಾರಿಗೆ ಕಟ್ಟಡ ಕುಸಿದು ಬೀಳಲು ಸಾಧ್ಯತೆ ಎಂಬುದರಿಂ ದಾಗಿ ಪ್ರಯಾಣ ವೇಳೆ ದುರಂತ ಸಂಭವಿಸುವ ಭೀತಿಯೂ ನೆಲೆಗೊಂಡಿದೆ. ಬಸ್ ಸಹಿತ ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆ ಮೂಲಕ ಸಾಗುತ್ತಿದೆ. ಚಟುವಟಿಕೆರಹಿತವಾದ ಈ ಕಟ್ಟಡವನ್ನು ಮುರಿದು ತೆಗೆಯಲು ಶಾಲಾ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page