ಕುಂಬಳೆ: 9.810 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಬಂಬ್ರಾಣ ದಿಡುಮೆ ನಿವಾಸಿ ಮುಹಮ್ಮದ್ ನೌಫಲ್ (27) ಎಂಬಾತನನ್ನು ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ರಾತ್ರಿ 7.25ರ ವೇಳೆ ನಯಾಬ ಜಾರ್ನಲ್ಲಿ ಎಸ್ಐ ಹಾಗೂ ತಂಡ ಗಸ್ತು ನಡೆಸುತ್ತಿದ್ದಾಗ ಮೊಹಮ್ಮದ್ ನೌಫಲ್ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದನು. ಪೊಲೀಸರ ವಾಹನವನ್ನು ಕಂಡು ಅಡಗಿ ನಿಲ್ಲಲು ಈತ ಪ್ರಯತ್ನಿಸಿದ್ದು, ಇದರಿಂದ ಪೊಲೀ ಸರು ಈತನನ್ನು ತಪಾಸಣೆಗೈದಾಗ ಮಾದಕವಸ್ತು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಜಿನೇಶ್, ಸಿವಿಲ್ ಪೊಲೀಸ್ ಆಫೀಸರ್ ನವೀ ನ್, ಚಾಲಕ ಅಜೇಶ್ ಕಾರ್ಯಾಚ ರಣೆ ನಡೆಸಿದ ತಂಡದಲ್ಲಿದ್ದರು.
