ವಿ.ಡಿ. ಸತೀಶನ್‌ರ ನಿರ್ದೇಶ ಕಡೆಗಣಿಸಿ ವಿಧಾನಸಭೆಗೆ ಹಾಜರಾದ ರಾಹುಲ್

ತಿರುವನಂತಪುರ: ಲೈಂಗಿಕ ಷೋಷಣೆ ಆರೋಪಗಳನ್ನು ಎದುರಿಸಿ ಅದರ ಹೆಸರಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲ್ಪಟ್ಟ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷ, ಪಾಲ ಕ್ಕಾಡ್ ಶಾಸಕ ವಿವಾದಗಳ ಮಧ್ಯೆಯೇ ಇಂದು ಬೆಳಿಗ್ಗೆ ಆರಂಭಗೊಂಡ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹಾಜ ರಾಗಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಅಮಾನತುಗೊಳಿ ಸಲ್ಪಟ್ಟ ಹಿನ್ನೆಲೆಯಲ್ಲಿ ವಿರೋಧಪಕ್ಷಗಳ ಆಸನಗಳ ಸಾಲಿನ   ಕೊನೆಯ ಭಾಗದಲ್ಲಿ  ರಾಹುಲ್‌ಗೆ  ಪ್ರತ್ಯೇಕ ಆಸನ ಸೌಕರ್ಯ ಏರ್ಪಡಿಸಲಾಗಿದೆ.

ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿರುವ ಹಾಗೂ ಪಕ್ಷದಿಂದ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳದಿರುವಂತೆ ರಾಹುಲ್‌ಗೆ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ನಿರ್ದೇಶ ನೀಡಿದ್ದರು. ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಅದಕ್ಕೆ ಕಿವಿಗೊಡದೆ  ಯೂತ್ ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಅಧ್ಯಕ್ಷ ನೇಮಂ ಸಜೀರ್‌ರ ಖಾಸಗಿ ವಾಹನದಲ್ಲಿ ರಾಹುಲ್ ಇಂದು ಬೆಳಿಗ್ಗೆ ೯ ಗಂಟೆಗೆ ವಿಧಾನಸಭೆಗೆ ಆಗಮಿಸಿದರು. ಇದು ಕಾಂಗ್ರೆಸ್‌ನ್ನು ಒಮ್ಮೆಲೇ ದಂಗುಪಡಿಸುವಂತೆ ಮಾಡಿದೆಯಲ್ಲದೆ ಈ ವಿಷಯದಲ್ಲ್ಲಿ ಏನು ಮಾಡಬೇಕೆಂದು ತಿಳಿಯದೆ ಕಾಂಗ್ರೆಸ್‌ನ್ನು ತಬ್ಬಿಬ್ಬುಗೊಳಿಸುವಂತೆ ಮಾಡಿತು.

ಲೈಂಗಿಕ ಆರೋಪ ಎದುರಿ ಸುತ್ತಿರುವ ರಾಹುಲ್ ಮಾಕೂಟತ್ತಿಲ್ ಮತ್ತು ಕಾಂಗ್ರೆಸ್‌ನ ವಿರುದ್ಧ ಆಡಳಿತ ಪಕ್ಷಗಳು ಹೌಹಾರಲು ಸಿದ್ಧತೆ ನಡೆಸಿರುವ ವೇಳೆಯಲ್ಲೇ ರಾಹುಲ್ ವಿಧಾನಸಭೆಗೆ ಆಗಮಿಸಿರುವುದು ಕಾಂಗ್ರೆಸ್‌ನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ. ಇಂದು ಬೆಳಿಗ್ಗೆ ಆರಂಭಗೊಂಡ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮೊದಲು ಅಗಲಿದ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್‌ರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಸದನದ ಇಂದಿನ ಕಾರ್ಯಕಲಾಪ ಗಳನ್ನು   ಕೊನೆಗೊಳಿಸಲಾಯಿತು. ನಾಳೆ ಅಧಿವೇಶನ ಪುನರಾರಂಭU ಳ್ಳಲಿದೆ. ರಾಹುಲ್‌ರ ಹೆಸರಲ್ಲಿ ನಾಳೆಯ ಅಧಿವೇಶನ ಸದ್ದುಗದ್ದಲ ಸೃಷ್ಟಿಸುವುದಂತೂ ಖಂಡಿತವಾಗಿದೆ.

You cannot copy contents of this page