ಕಾಸರಗೋಡು: ಪಾಲಕುನ್ನು ಪಳ್ಳಂನಲ್ಲಿ ಲಾರಿ ಹಾಗೂ ಫೋರ್ಚೂನರ್ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ಲಾರಿ ರಸ್ತೆ ಬದಿಗೆ ಮಗುಚಿದೆ. ಕಾರಿನಲ್ಲಿದ್ದ ಉದುಮ ನಿವಾಸಿ ಮಗುವಿಗೂ, ಲಾರಿಯಲ್ಲಿದ್ದ ಓರ್ವರಿಗೂ ಗಾಯವುಂಟಾಗಿದೆ. ಆದರೆ ಗಾಯ ಗಂಭೀರ ಸ್ಥಿತಿಯಲ್ಲಿಲ್ಲ. ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ತಿರುವನಂತಪುರಕ್ಕೆ ಟಯರ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಹಾಗೂ ಉದುಮ ಭಾಗಕ್ಕೆ ಬರುತ್ತಿದ್ದ ಕಾರು ಪಳ್ಳಂನಲ್ಲಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ತಲುಪಿದ ಬೇಕಲ ಎಸ್‌ಐ ಸವ್ಯಸಾಚಿಯವರ ನೇತೃತ್ವದಲ್ಲಿ ಗಾಯಗೊಂಡವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿದೆ.
