ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್ ಕ್ರಿಯಾ ಸಮಿತಿಯಿಂದ ಎಸ್‌ಡಿಪಿಐಯನ್ನು ಹೊರತು ಪಡಿಸಿರುವುದಾಗಿ ಕ್ರಿಯಾ ಸಮಿತಿ ವರ್ಕಿಂಗ್ ಚೆಯರ್‌ಮೆನ್ ಸಿ.ಎ. ಸುಬೈರ್ ತಿಳಿಸಿದ್ದಾರೆ. ಟೋಲ್ ಬೂತ್ ವಿರುದ್ದ ಕ್ರಿಯಾ ಸಮಿತಿ ನಡೆಸುವ ಚಳವಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆಂದೂ ಎಸ್‌ಡಿಪಿಐಯ ಇತರ ಪದಾಧಿ ಕಾರಿಗಳು ಎರಡು ದೋಣಿಯಲ್ಲಿ ಕಾಲಿಟ್ಟ ರೀತಿಯಲ್ಲಿ ವರ್ತಿ ಸುತ್ತಿದ್ದಾ ರೆಂದು ಸುಬೈರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರಿಯಾಸಮಿತಿ ನಡೆಸುವ ಚಳವಳಿಯನ್ನು ದೂಷಿಸುವ ವರನ್ನು ಹಾಗೂ ಕ್ರಿಯಾ ಸಮಿತಿ ವಿರುದ್ಧ ಸುಳ್ಳು ಪ್ರಚಾರ ನಡೆಸುವವರನ್ನು ಮುಷ್ಕರ ಸಮಿತಿ ನೇತಾರರು ವಿರೋಧಿಸುವುದಾಗಿ ತಿಳಿಸಲಾಗಿದೆ. ಚಳವಳಿಯನ್ನು ತಿರಸ್ಕರಿಸಿ ಹೇಳಿಕೆ ನೀಡುವವರನ್ನು ಅವರು ಪ್ರತಿನೀಧೀಕರಿಸುವ ಪಕ್ಷದ ನೇತಾರರು ನಿಯಂತ್ರಣ ದಲ್ಲಿರಿಸಬೇಕೆಂದು ಸುಬೈರ್ ತಿಳಿಸಿದ್ದಾರೆ.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಕ್ರಿಯಾ ಸಮಿತಿ ವಿರುದ್ಧ ರಂಗಕ್ಕಿಳಿಯುವಾಗ ಕಮಿಟಿಯಲ್ಲಿ ಒಳಗೊಂಡ ಎಸ್‌ಡಿಪಿಐ ಮಂಡಲ ಅಧ್ಯಕ್ಷ, ಪಂಚಾಯತ್ ಸಮಿತಿ ಅಧ್ಯಕ್ಷ ಆ ಸದಸ್ಯನನ್ನು ಬೆಂಬಲಿಸುತ್ತಿದ್ದಾರೆ. ಅಂತಹವರು ಕ್ರಿಯಾಸಮಿತಿಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಎಸ್‌ಡಿಪಿಐಯನ್ನು ಕ್ರಿಯಾ ಸಮಿತಿಯಿಂದಲೂ, ಕ್ರಿಯಾಸಮಿತಿಯ ಎಲ್ಲಾ ಗ್ರೂಪ್‌ಗಳಿಂದಲೂ ಹೊರತುಪಡಿಸಿರುವುದಾಗಿ ಸಿಪಿಎಂ ಏರಿಯಾ ಸೆಕ್ರೆಟರಿಯೂ ಆಗಿರುವ ಸಿ.ಎ ಸುಬೈರ್ ತಿಳಿಸಿದ್ದಾರೆ.