ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಹೆಚ್ಚುತ್ತಲೇ ಇದೆ. ನಿನ್ನೆ ಅಲ್ಪ ಕುಸಿತ ಕಂಡು ಬಂದ ಬೆಲೆ ಇನ್ನು ಮತ್ತೆ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ದರ ದಾಖಲಿಸಿದೆ. ಇದುವರೆಗಿನ ಸಾರ್ವಕಾಲಿಕ ದಾಖಲೆಗಳನ್ನೆಲ್ಲಾ ಮುರಿದು ಚಿನ್ನದ ಬೆಲೆಯ ನೆಗೆತ ಮುಂದುವರಿಯುತ್ತಿದೆ. 82,080 ರೂ. ಇಂದು ಒಂದು ಪವನ್ ಚಿನ್ನದ ಬೆಲೆಯಾಗಿದೆ. 640 ರೂ. ಇಂದು ಒಂದೇ ದಿನದಲ್ಲಿ ಹೆಚ್ಚಳ ಉಂಟಾಗಿದೆ. ಇದರಿಂದ 1 ಗ್ರಾಂ ಚಿನ್ನದ ಬೆಲೆ 10260 ಕ್ಕೆ ತಲುಪಿದೆ.
ಇಂದು ಒಂದು ಪವನ್ ಚಿನ್ನಾಭರಣ ಖರೀದಿಸಬೇಕಿದ್ದರೆ 3 ಶೇ. ಜಿಎಸ್ಟಿ, 53.10 ರೂಪಾಯಿ ಹಾಲ್ಮಾರ್ಕ್ ಶುಲ್ಕ, ಕನಿಷ್ಠ 5 ಶೇ. ಮಜೂರಿ ಸೇರಿದರೆ 88,825 ರೂ. ನೀಡಬೇಕಾಗಿದೆ. 1 ಗ್ರಾಂ ಖರೀ ದಿಸಬೇಕಿದ್ದರೆ 11,105 ರೂ. ನೀಡಬೇಕಾಗಿದೆ. ಬೆಳ್ಳಿ ಗ್ರಾಂಗೆ 144 ರೂ. ಹಾಗೂ ಕಿಲೋ ಗ್ರಾಂಗೆ 1ಲಕ್ಷದ 44,000 ರೂ. ಆಗಿದೆ. ಈ ತಿಂಗಳಲ್ಲಿ ಇದು ವರೆಗೆ ರಾಜ್ಯದಲ್ಲಿ ಪವನ್ಗೆ 4440 ರೂ. ಹೆಚ್ಚಾಗಿದೆ. ವಿಶ್ವದ ಅತ್ಯಂತ ದೊಡ್ಡ ಚಿನ್ನ ಗ್ರಾಹಕರಿ ರುವುದು ಭಾರತದಲ್ಲಾಗಿದೆ. ಪ್ರತೀ ವರ್ಷವೂ ಟನ್ ಲೆಕ್ಕ ದಲ್ಲಿ ಚಿನ್ನವನ್ನು ದೇಶ ಆಮದು ಮಾಡಿಕೊಳ್ಳುತ್ತಿದೆ. ಆದುದ ರಿಂದ ಜಾಗತಿಕ ಮಾರುಕಟ್ಟೆ ಯಲ್ಲಿ ಉಂಟಾಗುವ ಸಣ್ಣ ಚಲನೆಗಳು ಕೂಡಾ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿಫಲನೆ ಸೃಷ್ಟಿಸುತ್ತಿದೆ.
