ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಹೊಸದುರ್ಗಕ್ಕೆ ಸಮೀಪದ ಕರಿಂದಳ ಪುಲಿಯನ್ನೂರಿನ ವಿಜಯನ್ ಎಂಬವರ ಪತ್ನಿ ಒ. ಸವಿತ (48) ಸಾವನ್ನಪ್ಪಿದ ಯುವತಿ. ಕಾಂಕ್ರೀಟ್ ಮನೆಯ ಎರಡನೇ ಅಂತಸ್ತಿನ ಕೊಠಡಿಯೊಳಗೆ ಇವರು ನಿನ್ನೆ ದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ದೇಹಪೂರ್ತಿ ಸುಟ್ಟು ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಪತಿ ವಿಜಯನ್ ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದ ಹೋಗಿದ್ದರು. ವಿದ್ಯಾರ್ಥಿಯಾಗಿರುವ ಮಗ ಕಾಲೇಜಿಗೆ ಹೋಗಿದ್ದನು. ಆ ಬಳಿಕ ಸವಿತ ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯೊಳಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ತಕ್ಷಣ ಬಂದು ನೋಡಿದಾಗ ಕೊಠಡಿಯೊಳಗೆ ಸವಿತ ಬೆಂಕಿ ತಗಲಿ ಸುಟ್ಟು ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ನೀಡಿದ ಮಾಹಿತಿಯಂತೆ ಹೊಸದುರ್ಗ ಅಗ್ನಿಶಾಮಕದಳ ಸ್ಥಳಕ್ಕಾಗಮಿಸುವ ಮುಂಚಿತವಾಗಿ ಊರವರೇ ಬೆಂಕಿ ನಂದಿಸಿದ್ದರು. ನೀಲೇಶ್ವರ ಠಾಣೆಯ ಎಸ್‌ಐ ಸಿ. ಸುಮೇಶ್ ಬಾಬು ನೇತೃತ್ವದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಸವಿತ ಚೀಮೇನಿಯ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ದುಡಿಯುತ್ತಿದ್ದರು.
ಮೃತರು ಪತಿಯ ಹೊರತಾಗಿ ಮಕ್ಕಳಾದ ಕೃಷ್ಣ, ಸಂಜಯ್ (ಪದವಿ ವಿದ್ಯಾರ್ಥಿ), ಅಳಿಯ ವಿಷ್ಣು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಿದ್ದಾರೆ. ಸವಿತರ ಸಾವಿನ ಕಾರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.