ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಸೆರೆಗೀಡಾದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ನಾರಂಪಾಡಿ ನಿವಾಸಿಯಾದ ಅಬ್ದುಲ್ ರಸಾಕ್ (35) ಎಂಬಾತನನ್ನು ಬದಿಯಡ್ಕ ಎಎಸ್‌ಐ ಮುಹಮ್ಮದ್ ನೇತೃತ್ವದ ಪೊಲೀಸ್ ತಂಡ ಅಜ್ಮೀರ್‌ನಿಂದ ಸೆರೆಹಿಡಿದಿದೆ.
2023ರಲ್ಲಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪೋಕ್ಸೋ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಪ್ರಸ್ತುತ ಪ್ರಕರಣದಲ್ಲಿ ಸೆರೆಗೀಡಾದ ಅಬ್ದುಲ್ ರಸಾಕ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂ ಡಿದ್ದನು. ನಿರಂತರ ವಾರಂಟ್ ಹೊರಡಿಸಿದರೂ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಈತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿರುವ ವೇಳೆ ಆರೋಪಿ ವೇಷ ಪಲ್ಲಟಗೊಳಿಸಿ ಅಜ್ಮೀರ್‌ನಲ್ಲಿ ವಾಸಿಸುತ್ತಿರುವುದಾಗಿ ಮಾಹಿತಿ ಲಭಿಸಿತ್ತು. ಇದರಂತೆ ಎಎಸ್‌ಐ ನೇತೃತ್ವದಪೊಲೀಸ್ ತಂಡ ಅಜ್ಮೀರ್‌ಗೆ ತೆರಳಿ ಆರೋಪಿಯನ್ನು ಬಂಧಿಸಿದೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಎಸ್‌ಐ ಜತೆಗೆ ಸಿಪಿಒಗಳಾದ ಗೋಕುಲ್, ಶ್ರೀನೇಶ್ ಎಂಬಿವರಿದ್ದರು.