ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಉನ್ನತರ ಸಹಿತ ಒಂಭತ್ತು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ೮ ಮಂದಿ ಸಹಿತ 14 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಳ್ಳಲಾಗಿದೆ. ಉಳಿದ ಆರು ಮಂದಿ ಆರೋಪಿಗಳ ವಿರುದ್ದ ಕಣ್ಣೂರು, ಕಲ್ಲಿಕೋಟೆ, ಎರ್ನಾಕುಳಂನಲ್ಲಿ ಕೇಸು ದಾಖಲಿಸ ಲಾಗಿದೆ. ಡೇಟಿಂಗ್ ಆಪ್ ಮೂಲಕ ಆರೋಪಿಗಳು ಬಾಲಕನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಎರಡು ವರ್ಷಗಳಿಂದ ಇವರು ಬಾಲಕನಿಗೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲೂ, ಜಿಲ್ಲೆಯ ಹೊರಗೂ ಆರೋಪಿಗಳು ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇತ್ತೀಚೆಗೆ ಬಾಲಕನ ಮನೆಗೆ ಒಬ್ಬಾತ ಬಂದಿದ್ದು ಅದನ್ನು ತಾಯಿ ಕಂಡಿದ್ದಳು. ಈ ವೇಳೆ ವ್ಯಕ್ತಿ ಓಡಿ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಚಂದೇರ ಪೊಲೀಸರಿಗೆ ದೂರು ನೀಡಲಾಗಿದೆ. ಬಳಿಕ ಚೈಲ್ಡ್ ಲೈನ್ ಅಧಿಕಾರಿಗಳು ಬಾಲಕನನ್ನು ವಿಚಾರಿಸಿದಾಗ ಕಿರುಕುಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಚೈಲ್ಡ್ ಲೈನ್‌ನಿಂದ ಲಭಿಸಿದ ವರದಿಯ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ನಿರ್ದೇಶ ಪ್ರಕಾರ ವೆಳ್ಳರಿಕುಂಡ್, ಚೀಮೇನಿ, ನೀಲೇಶರ, ಚಿಟ್ಟಾರಿಕಲ್, ಚಂದೇರ ಪೊಲೀಸ್ ಠಾಣೆಗಳ ಹೌಸ್ ಆಫೀಸರ್‌ಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗಿದೆ. ತಲಾ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವಂತೆ ಎಸ್‌ಎಚ್‌ಒಗಳ ನೇತೃತ್ವದ ತಂಡಕ್ಕೆ ಹೊಣೆಗಾರಿಕೆ ನೀಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಉದ್ಯೋಗದಲ್ಲಿರು ವವರು, ಆರ್‌ಪಿಎಫ್ ಅಧಿಕಾರಿಗಳು, ರಾಜಕೀಯ ನೇತಾರ ಎಂಬಿವರು ಆರೋಪಿಗಳ ಪಟ್ಟಿಯಲ್ಲಿದ್ದಾರೆಂದು ತಿಳಿದುಬಂದಿದೆ.