ಕೊಚ್ಚಿ: ಆರ್ಎಸ್ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಡಿಸೆಂಬರ್ನಲ್ಲಿ ಕೇರಳಕ್ಕೆ ಆಗಮಿಸುವರು. ಆರ್ಎಸ್ಎಸ್ನ ಶತಮಾನೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು. ಆರ್ಎಸ್ಎಸ್ ಉತ್ತರ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ ಡಿ. 7ರಂದು ತೃಶೂರು ಹಾಗೂ ದಕ್ಷಿಣ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ 8ರಂದು ತಿರುವನಂತಪರದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದೆ. ಈ ವರ್ಷ ವಿಜಯ ದಶಮಿ ದಿನದಿಂದ 2026 ವಿಜಯದಶಮಿವರೆಗೆ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯಲಿದೆ.
