ಪೈವಳಿಕೆ: ಹದಗೆಟ್ಟು ಶೋಚನೀ ಯಾವಸ್ಥೆಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್ಬಾಗ್- ಕುರುಡಪದವು ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಧಿಕಾರಿ ವರ್ಗ ಕೊನೆಗೂ ಮುಂದಾಗಿದೆ. ಪ್ರಥಮ ಹಂತದಲ್ಲಿ ಲಾಲ್ಬಾಗ್ ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃ ದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿ ಒಂದು ವಾರದಿಂದ ನಡೆಯುತ್ತಿದೆ. ಕುಂಬಳೆ ನಿವಾಸಿಯೋ ರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಹದಗೆಟ್ಟು ಮಳೆಗಾಲ, ಬೇಸಿಗೆಗಾಲ ದಲ್ಲೂ ಬಸ್ ಸಹಿತ ವಾಹನ ಸಂಚಾರ ನರಕಯಾತನೆ ಯಾಗಿತ್ತು. ಹಲವು ಬಾರಿ ಊರವರು ಸಂಬAಧಪಟ್ಟ ಅಧಿಕಾರಿ ವರ್ಗದವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಊರವರು ಒಟ್ಟು ಸೇರಿ ಮಂಜೇಶ್ವರ ಲೋಕೋಪ ಯೋಗಿ ಇಲಾಖೆ ಕಚೇರಿಗೆ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಆ ಬಳಿಕ ಈಗ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಊರವರಲ್ಲಿ ನೆಮ್ಮದಿಯನ್ನುಂಟುಮಾಡಿದೆ. ಕಳಪೆ ಕಾಮಗಾರಿ ನಡೆಸದೆ ಅಚ್ಚುಕಟ್ಟಾಗಿ ರಸ್ತೆಯ ದುರಸ್ತಿಗೊಳಿಸಬೇಕೆಂದು, ಉಳಿದ ಕುರುಡಪದವು ತನಕದ ರಸ್ತೆಯನ್ನು ಶೀಘ್ರವೇ ಅಭಿ ವೃದ್ಧಿಗೊಳಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.
