ಮಂಜೇಶ್ವರ :ಕಾರು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡ ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಉಳಿಯತ್ತಡ್ಕ ಎಸ್ಪಿ ನಗರದ ಅಬ್ದುಲ್ ಅಶ್ಪಾಕ್ (31) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಹೊಸಬೆಟ್ಟು ಕಟ್ಟೆಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರು ನೀಡಿದ ದೂರಿನಂತೆ ಅಬ್ದುಲ್ ಅಶ್ಪಾಕ್ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಆರೋಪಿಗಳು ಇತ್ತೀಚೆಗೆ ಮದುವೆ ಅಗತ್ಯಕ್ಕೆಂದು ತಿಳಿಸಿ ಮಜೀದ್ರ ಕಾರನ್ನು ಖರೀದಿಸಿ ಅಲ್ಪ ಮೊತ್ತವನ್ನು ಮುಂಗಡವಾಗಿ ನೀಡಿದ್ದರೆನ್ನಲಾಗಿದೆ. ಬಳಿಕ ಹಣ ಕೇಳಿದಾಗ ತಂಡ ಬೆದರಿಕೆಯೊಡ್ಡಿ ರುವ ಬಗ್ಗೆ ಆರೋಪಿಸಿ ಮಜೀದ್ ಕಾಸರಗೋಡು ಎಎಸ್ಪಿಗೆ ದೂರು ನೀಡಿದ್ದರು. ಎಎಸ್ಪಿ ನಿರ್ದೇಶದ ಪ್ರಕಾರ ಮಂಜೇಶ್ವರ ಪೊಲೀಸರು ಐದು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.