ಕುಂಬಳೆ ಟೋಲ್ ಬೂತ್ ವಿರುದ್ಧ ಚಳವಳಿ: ಬಿಜೆಪಿ ಕೋಮು ಭಾವನೆಯಿಂದ ಕಾಣುತ್ತಿದೆ- ಕ್ರಿಯಾ ಸಮಿತಿ

ಕುಂಬಳೆ: ಕುಂಬಳೆಯಲ್ಲಿ ಕಾನೂನು ವಿರುದ್ಧವಾಗಿ ನಿರ್ಮಿಸುವ ಟೋಲ್ ಬೂತ್ ವಿರುದ್ಧ ನಡೆಸುವ ಚಳವಳಿಯನ್ನು ಬಿಜೆಪಿ ಕೋಮುಭಾವನೆಯಿಂದ ಕಾಣುತ್ತಿದೆಯೆಂದು ಜನಪರ ಕ್ರಿಯಾ ಸಮಿತಿ ಆರೋಪಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮರೆಯಲ್ಲಿ 22 ಕಿಲೋ ಮೀಟರ್ ಅಂತರದಲ್ಲಿ ಕುಂಬಳೆ ಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸ್ಥಾಪಿಸುವ ಟೋಲ್ ಬೂತ್ ವಿರುದ್ಧ ಜನಪರ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುವ ಚಳವಳಿಯಲ್ಲಿ ಎಲ್ಲಾ ವಿಭಾಗದ ಜನರು ಭಾಗವಹಿಸು ತ್ತಿದ್ದಾರೆ. ಈ ಸಂದರ್ಭದಲ್ಲಿ ಅದನ್ನು ಕೋಮು ಭಾವನೆಯಿಂದ ಕಾಣುವ ಪ್ರಯತ್ನದಿಂದ ಬಿಜೆಪಿ ಹಿಂಜರಿಯಬೇ ಕೆಂದು ಕ್ರಿಯಾ ಸಮಿತಿ ಒತ್ತಾಯಿಸಿದೆ.

You cannot copy contents of this page