ಕುಂಬಳೆ ಪಂ. ಕಟ್ಟಡದಲ್ಲಿ ಬೀಫ್ ಸ್ಟಾಲ್ ತೀವ್ರ ಚಳವಳಿಗೆ ಬಿಜೆಪಿ ನಿರ್ಧಾರ

ಕುಂಬಳೆ: ಕುಂಬಳೆ ಗ್ರಾಮ ಪಂಚಾ ಯತ್‌ನ ಮಾರುಕಟ್ಟೆ ಸಮೀಪವಿರುವ ಪಂಚಾಯತ್ ಕಟ್ಟಡದಲ್ಲಿರುವ ಬೀಫ್ ಸ್ಟಾಲ್ ಅನಧಿಕೃತವಾಗಿ ಕಾರ್ಯಾ ಚರಿಸುತ್ತಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ತಿಳಿಸಿದೆ. ಪಂಚಾಯತ್‌ನ ನಿಯಮ ಪ್ರಕಾರ ಯಾವುದೇ ರೀತಿಯ ಮಾಂಸದ ಅಂಗಡಿಯನ್ನು ತರಕಾರಿ, ದೀನಸಿ, ಹಣ್ಣು ಹಂಪಲು ಅಂಗಡಿ ಸಮೀಪ ತೆರೆಯ ಕೂಡದ್ದಾಗಿದೆ. ಕಳೆದ 12 ವರ್ಷಗಳಿಂದ ಈ ಕಾನೂನು ಜ್ಯಾರಿಯಲ್ಲಿದೆ. ಆದರೆ ಇದೀಗ ಪಂಚಾಯತ್‌ನ ಅಧೀನದ ಕಟ್ಟಡದಲ್ಲಿ ಬೀಫ್ ಸ್ಟಾಲ್ ತೆರೆಯಲು ಪಂಚಾಯತ್ ಅಧಿಕಾರಿಗಳು ಅನುಮತಿ ನೀಡಿರುವುದಾಗಿ ಬಿಜೆಪಿ ಆರೋಪಿಸಿದೆ.

ಬೀಫ್ ಸ್ಟಾಲ್ ಮುಚ್ಚುಗಡೆಗೊಳಿಸ ಬೇಕೆಂದು ಒತ್ತಾಯಿಸಿ ಪಂಚಾಯತ್ ಅಧಿಕಾರಿಗಳಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಆದರೆ ಮುಸ್ಲಿಂ ಲೀಗ್, ಕಾಂಗ್ರೆಸ್ ಒಕ್ಕೂಟದ ಯುಡಿಎಫ್ ಆಡಳಿತ ಕಾನೂನು ಗಾಳಿಗೆ ತೂರಿ ಅಧಿಕಾರಿಗಳ ಮೂಲಕ ಬೀಫ್ ಸ್ಟಾಲ್‌ಗೆ ಅನುಮತಿ ನೀಡಿರುವುದಾಗಿಯೂ ಬಿಜೆಪಿ ಆರೋಪಿಸಿದೆ. ಬೀಫ್ ಸ್ಟಾಲ್‌ಗೆ ಅನುಮತಿ ನೀಡಲು ಹಿಂಜರಿದ ಪಂಚಾಯತ್ ಕಾರ್ಯದರ್ಶಿಯನ್ನು ಪಂ. ಆಡಳಿತ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಬೀಫ್ ಸ್ಟಾಲ್‌ನ ರೀತಿಯಲ್ಲೇ ಇತರ ಹಲವು ಅಂಗಡಿಗಳು ಅನಧಿಕೃತವಾಗಿ ತಲೆಯೆತ್ತಿದೆ. ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗು ವುದು. ಬೀಫ್ ಸ್ಟಾಲ್‌ನ ವಿಷಯದಲ್ಲಿ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಬಿಜೆಪಿ ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

You cannot copy contents of this page