ಗಲ್ಫ್‌ನಿಂದ ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕ ನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೀಯೂರು ಕಡಪ್ಪುರದ  ದಿ| ರಾಜನ್ ಎಂಬವರ ಪುತ್ರ ರಾಹುಲ್ (21) ಮೃತಪಟ್ಟ ಯುವಕ. ನಿನ್ನೆ ಮಧ್ಯಾಹ್ನ ವೇಳೆ ರಾಹುಲ್ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಕಂಡ ಮನೆಯವರು ಕೂಡಲೇ ಕೆಳಗಿಳಿಸಿ ದೇಳಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಗಲ್ಫ್‌ನಲ್ಲಿದ್ದ ರಾಹುಲ್ ೫ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಸೌಮಿನಿ, ಸಹೋದರಿಯರಾದ ಚಿಪ್ಪಿ, ಅಪರ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page