ಕೋಳಿ ಅಂಕಕ್ಕೆ ಮಫ್ತಿವೇಷದಲ್ಲಿ ಪೊಲೀಸ್ ದಾಳಿ: 7 ಮಂದಿ ಸೆರೆ; ಒಂಭತ್ತು ಕೋಳಿ, ಹಣ ವಶ

ಕುಂಬಳೆ: ಇಚ್ಲಂಗೋಡು ಅಣೆಕಟ್ಟಿನ ಸಮೀಪ ಕಾಡಿನೊಳಗೆ ಕೋಳಿ ಅಂಕ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. ಸ್ಥಳದಿಂದ ೯ ಕೋಳಿಗಳು ಹಾಗೂ 2750 ರೂ.ಗಳನ್ನು ವಶಪಡಿಸಲಾಗಿದೆ. ಕಾಸರಗೋಡು ಕೂಡ್ಲುವಿನ ಸಂತೋಷ್ (32), ಬಾಯಾರು ಕನ್ಯಾನದ ದಿಲೀಪ್ (35), ಉಪ್ಪಳ ಮಜಿಬೈಲ್‌ನ ಸೀತಾರಾಮ ಶೆಟ್ಟಿ (45), ಬೇಕೂರಿನ ಸಂತೋಷ್ ಶೆಟ್ಟಿ (45), ಪೈವಳಿಕೆಯ ಐತ್ತಪ್ಪ (30), ಬಾಯಾರ್‌ನ ಕಿಶೋರ್ (30), ಇಚ್ಲಂಗೋಡ್‌ನ ಸುಂದರ ಶೆಟ್ಟಿ (60) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಇನ್ಸ್‌ಪೆಕ್ಟರ್ ಹಾಗೂ ಎಸ್‌ಐ ಶ್ರೀಜೇಶ್, ಪೊಲೀಸರಾದ ಪ್ರತೀಶ್, ಇಸ್ಮಾಯಿಲ್ ಎಂಬಿವರು ಮಫ್ತಿ ವೇಷದಲ್ಲಿ ಖಾಸಗಿ ವಾಹನದಲ್ಲಿ ತೆರಳಿ ಕೋಳಿ ಅಂಕದಲ್ಲಿ ನಿರತರಾಗಿದ್ದ ತಂಡವನ್ನು ಸೆರೆ ಹಿಡಿದಿದ್ದಾರೆ. ಕಸ್ಟಡಿಗೆ ತೆಗೆದ ಕೋಳಿಗಳು ಹಾಗೂ ಹಣವನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page