ಕುಂಬಳೆ: ಕುಲಾಲ ಸಂಘ ಕುಂಬಳೆ ಪಂಚಾಯತ್ ಶಾಖೆಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕಳತ್ತೂರು ಶ್ರೀ ಮಹಾದೇವ ಸಭಾಭವನನಲ್ಲಿ ಜರಗಿತು. ಗಂಗಾಧರ ಕೆ.ಟಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್ ಕುಲಾಲ್ ಶ್ರಾವಣಕರ, ಉಪನ್ಯಾಸಕ ಡಾ .ಆನಂದ ಎಂ ಕಿದೂರು ಅವರನ್ನು ಗೌರವಿಸಲಾಯಿತು.
ಕುಲಾಲ ಬಂಜನ್ ಆದಿ ಮೂಲ ದೈವಸ್ಥಾನ ಅಮೆತ್ತೋಡು ಇದರ ಅಧ್ಯಕ್ಷ ನಾರಾಯಣ ಮೀಂಜ, ಮೀನಾಕ್ಷಿ ವಸಂತ್ ಪುಣಿಯೂರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ, +2 ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪಂಚಾಯತು ವ್ಯಾಪ್ತಿಯ ಕುಲಾಲ್ ವಿಧ್ಯಾರ್ಥಿಗಳನ್ನು ಅಭಿನಂದಿಸ ಲಾಯಿತು.
ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಕುಲಾಲ್ ನಾರಾಯಣಮಂಗಲ, ಉಪಾಧ್ಯಕ್ಷರಾಗಿ ಚಂದ್ರಕಲಾ ಕೃಷ್ಣ ಕಮರ್ತೆ, ಕಾರ್ಯದರ್ಶಿಯÁಗಿ ಸತೀಶ ಶ್ರಾವಣಕೆರೆ, ಜತೆ ಕಾರ್ಯದರ್ಶಿಯÁಗಿ ರೂಪೇಶ್ ಪುಣಿಯೂರು, ಕೋಶಾಧಿಕಾರಿಯÁಗಿ ನಾರಾಯಣ ಕೆ ಕಳತೂರು, ಸೇವಾ ದಳಪತಿಗಳಾಗಿ ಅಶೋಕ ಪುಣಿಯೂರು, ಗಂಗಾಧರ ಕೆ.ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಶೇಷಪ್ಪ ಕುಲಾಲ್ ಕಳತೂರು, ಭರತ್ ರಾಜ್ ಪುಣಿಯೂರು ಶ್ರೀ ಕೃಷ್ಣ ಶ್ರಾವಣಕೆರೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕೃಷ್ಣ ಕಳತೂರು ಶ್ರೀನಿವಾಸ ಮಾಸ್ಟರ್ ಕಮರ್ತೆಶ್ರೀಧರ ಪುಣಿಯೂರು ಹಾಗೂ 21 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಅಶೋಕ್ ಪುಣಿಯೂರು ಸ್ವಾಗತಿಸಿ, ಕೃಷ್ಣ ಕಳತ್ತೂರು ವಂದಿಸಿದರು.
