ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ನೀಡುವ ಡಿಬಿಟಿಎ ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎ. ಮೋಹನ ಕುಂಟಾರು ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಅಧ್ಯಕ್ಷೆ ಡಾ. ಸುಷ್ಮಾಶಂಕರ್ ತಿಳಿಸಿದ್ದಾರೆ. ಮಲೆಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ತಗಳಿ ಶಿವಶಂಕರ ಪಿಳ್ಳೆಯವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ ಕೃತಿಯನ್ನು ಮೋಹನ್ ಕುಂಟಾರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪುಸ್ತಕಕ್ಕೆ ಪ್ರಶಸ್ತಿ ಘೋಷಿಸಲಾಗಿದೆ. ನಗದು ಪ್ರಶಸ್ತಿ ಪತ್ರ, ಫಲಕ ಒಳಗೊಂಡ ಪ್ರಶಸ್ತಿಯನ್ನು ಈ ತಿಂಗಳ 26ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುವುದು.
