ಕಾಸರಗೋಡು: ಭಾರತೀಯ ಜನತಾ ಪಕ್ಷ ಕಾಸರಗೋಡು ನಗರ ಸಭೆಯ 9ನೇ ವಾರ್ಡ್ ಸಮಾವೇಶ ಜೆಪಿ ನಗರದ ಕನ್ನಡ ಗ್ರಾಮ ಸಭಾ ಮಂಟಪದಲ್ಲಿ ನಡೆಯಿತು. ಜಿಲ್ಲಾಧ್ಯಕೆ್ಷ ಎಂ.ಎಲ್ ಅಶ್ವಿನಿ ಉದ್ಘಾಟಿಸಿ, ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರ ನಿಸ್ವಾರ್ಥ ಸೇವೆ ಯಿಂದ ಪಕ್ಷ ಸಂಘಟಿತವಾಗುತ್ತಿದೆ ಮುಂಬರುವ ನಗರಪಾಲಿಕೆ ಚುನಾವಣೆ ಹಾಗೂ ವಿಧಾನಸಭಾ ಚುನಾ ವಣೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಲು ಎಲ್ಲ ಕಾರ್ಯಕರ್ತರು ಮುನ್ನುಗ್ಗಬೇಕೆಂದು ಅವರು ಕರೆ ನೀಡಿದರು. ನಗರ ಸಭಾ ಮಾಜಿ ಸದಸ್ಯ ಕೆ. ಶಂಕರ್ ಅಧ್ಯಕ್ಷತೆ ವಹಿಸಿದರು .ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್ ಸುನಿಲ್, ಪೂರ್ವ ವಲಯ ಅಧ್ಯಕ್ಷ ವರ ಪ್ರಸಾದ್ ಕೊಟÉಕಣಿ, ಕಾರ್ಯದರ್ಶಿ ರಾಮ್ ಮೋಹನ್. ನಗರಸಭಾ ಸದಸ್ಯ ಶಾರದ. ವಾರ್ಡ್ ಮ್ಯಾನೇಜ್ಮೆಂಟ್ ಸಮಿತಿ ಕನ್ವೇನರ್ ರಮೇಶ್ ಮಾತನಾಡಿದರು.
