ಪೈವಳಿಕೆ: ಹುತಾತ್ಮ ಶೆಟ್ಟಿ ಸಹೋದರರಾದ ಸುಂದರ, ಮಹಾಬಲ, ಚೆನ್ನಪ್ಪರ ಸ್ಮಾರಕವಾಗಿ ಬೋಳಂಗಳದಲ್ಲಿ ನಿರ್ಮಿಸಿದ ಮಂದಿರವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದರು. ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶ್ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು. ಹಿರಿಯರಾದ ನಾರಾಯಣ ಶೆಟ್ಟಿ ಧ್ವಜಾರೋಹಣಗೈದರು. ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು. ಲೋಕಲ್ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ ಸ್ವಾಗತಿಸಿದರು. ಇದೇ ವೇಳೆ ಹುತಾತ್ಮರ ಸ್ಮಾರಕ ವಾಚನಾಲಯವನ್ನು ಉದ್ಘಾಟಿಸಲಾಯಿತು.
