ಕಾಸರಗೋಡು: 2011ರಲ್ಲಿ ಕಾಞಂಗಾಡ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಯೆಂದು ಘೋಷಿಸಿದ ಯುವಕ ಸೆರೆಗೀಡಾಗಿದ್ದಾನೆ. ಹೊಸದುರ್ಗ ಕಡಪ್ಪುರದ ದೀಪು (35) ಎಂಬಾತ ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. 2011ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ತಂಡ ಸೇರಿ ಆಕ್ರಮಣ ಹಾಗೂ ಪುರಾವೆ ಗಳನ್ನು ನಾಶಗೊಳಿಸಲಾಯಿತು ಮೊದಲಾದ ಕಾಯ್ದೆಗಳ ಪ್ರಕಾರ ದೀಪು ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿಯನ್ನು ಪಂಧಿಸಲಾಗಿತ್ತು. ಅನಂತರ ಜಾಮೀನಿನಲ್ಲಿ ಬಿಡು ಗಡೆಗೊಂಡಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗದ ಹಿನ್ನೆಲೆಯಲ್ಲಿ 2024ರಲ್ಲಿ ಹೊಸದುರ್ಗ ನ್ಯಾಯಾಲಯ ದೀಪುವನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತು. ಪೊಲೀಸರು ನಡೆಸಿದ ತನಿಖೆ ವೇಳೆ ದೀಪು ಗಲ್ಫ್‌ಗೆ ಪರಾರಿ ಯಾಗಿರುವುದಾಗಿ ತಿಳಿದು ಬಂದಿತ್ತು. ಈತ ಊರಿಗೆ ಮರಳಿದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಡೆಸಿದ ತನಿಖೆ ವೇಳೆ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
