ಪತ್ತನಂತಿಟ್ಟ: ಪಂಪಾದಲ್ಲಿ ನಾಳೆ ನಡೆಯಲಿರುವ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರಲ್ಲಿ ದೇಶ ವಿದೇಶಗಳಿಂದಾಗಿ 3500 ಪ್ರತಿನಿಧಿ ಗಳು ಭಾಗವಹಿಸಲಿ ದ್ದಾರೆಂದು ಮುಜುರಾಯಿ ಖಾತೆ ಸಚಿವ ವಿ.ಎಸ್. ವಾಸನ್ ತಿಳಿಸಿದ್ದಾರೆ.
ಅಯ್ಯಪ್ಪ ಸಂಗಮವನ್ನು ನಾಳೆ ಬೆಳಿಗ್ಗೆ 9.30೦ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿ ಸುವರು. ಭಾಗವಹಿಸುವ ಪ್ರತಿನಿಧಿಗಳ ಹೆಸರು ನೋಂದಾವಣೆ ನಾಳೆ ಬೆಳಿಗ್ಗೆ 6ರಿಂದ ಆರಂಭಗೊಳ್ಳ ಲಿದೆ. ಜಾಗತಿಕ ಸಮ್ಮೇಳನದಂಗ ವಾಗಿ ಬೆಳಿಗ್ಗೆ 11.30ರಿಂದ ಮೂರು ವೇದಿಕೆಗಳಲ್ಲಾಗಿ ಚರ್ಚೆ ಆರಂಭಗೊಳ್ಳಲಿದೆ. ಜರ್ಮನ್ ತಂತ್ರಜ್ಞಾನದೊಂದಿಗೆ ಹವಾ ನಿಯಂತ್ರಣ ಹೊಂದಿರುವ ಮೂರು ಹೈಟೆಕ್ ವೇದಿಕೆಗಳನ್ನು ಇದಕ್ಕಾಗಿ ನಿರ್ಮಿಸಲಾಗಿದೆ. ವೇದಿಕೆಯಲ್ಲಿ 20 ಮೀಟರ್ ಉದ್ದದ ಎಲ್.ಇ.ಡಿ. ಸ್ಕ್ರೀನ್‌ಗಳನ್ನು ಸ್ಥಾಪಿಸಲಾಗಿದೆ. 16 ವಿದೇಶ ರಾಷ್ಟ್ರಗಳಿಂದಾಗಿ 250ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿ ಸುವರು. ಶಬರಿಮಲೆಯನ್ನು ಒಂದು ಪ್ರಧಾನ ಜಾಗತಿಕ ತೀರ್ಥಾಟನಾ ಕೇಂದ್ರವನ್ನಾಗಿ ಮಾಡುವುದರ ಜತೆಗೆ ಶಬರಿಮಲೆಯ ಸಮಗ್ರ ಅಭಿವೃದ್ಧಿ ಗಾಗಿ ಬೃಹತ್ ಮಾಸ್ಟರ್ ಪ್ಲಾನ್ ತಯಾರಿಸುವ ವಿಷಯ ಸಂಗಮ ಕಾರ್ಯಕ್ರಮದ ಕಾರ್ಯ ಸೂಚಿಯಲ್ಲಿ ಒಳಪಡಿಸಲಾಗಿದೆ.
ಸಮ್ಮೇಳನದ ಅಂಗವಾಗಿ ಪಂಪಾ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಇದಕ್ಕಾಗಿ 1000ದಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಶ್ರೀಜಿತ್‌ರಿಗೆ ಭದ್ರತೆಯ ಹೊಣೆಗಾರಿಕೆ ಯನ್ನು ವಹಿಸಿ ಕೊಡಲಾಗಿದೆ. ಭದ್ರತೆ ಸಲುವಾಗಿ ಪಂಪಾ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗು ಪೊಲೀಸ್ ಪರಿಶೀಲನೆಯನ್ನು ಈಗಾಗಲೇ ಆರಂಭಿಸಲಾಗಿದೆ. ಪಾಸ್‌ಗಳ ಮೂಲಕ ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಪ್ರವೇಶಿಸಲಾಗುವುದು.