ಕುಂಬಳೆ: ಮೀನು ಕಾರ್ಮಿಕನಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರುವಾಡ್ ಕಡಪ್ಪುರ ನಿವಾಸಿ ದಿ| ಮೊಹಮ್ಮದ್ ನಾಸರ್ ಎಂಬವರ ಪುತ್ರ ಮೊಹಮ್ಮದ್ ಅಯಾಸ್ (37) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ರಾತ್ರಿ ಇವರು ಊಟ ಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ತೆರೆದು ನೋಡಿದಾಗ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ.
ಮೃತರು ತಾಯಿ ಮರಿಯಮ್ಮ, ಪತ್ನಿ ಫಸೀಲ, ಪುತ್ರಿ ದಿಯಾ, ಸಹೋದರ ರಿಯಾಸ್, ಸಹೋದರಿ ಸನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.