ಬೆಳ್ತಂಗಡಿ: ನೇತ್ರಾವತಿ ಸ್ನಾನ ಘಟ್ಟದ ಬಳಿ ಬಂಗ್ಲೆ ಗುಡ್ಡೆ ಕಾಡಿನಲ್ಲಿ ನಡೆ ಯುತ್ತಿರುವ ಶೋಧ ವೇಳೆ ಪತ್ತೆಹಚ್ಚ ಲಾದ ಏಳು ತಲೆಬುರುಡೆಗಳು ಕೂಡಾ ಗಂಡಸರದ್ದೇ ಆಗಿದೆಯೆಂದು ತನಿಖಾ ತಂಡ ದೃಢೀಕರಿಸಿರುವುದಾಗಿ ತಿಳಿದುಬಂದಿದೆ. ಒಂದು ತಲೆಬುರು ಡೆಗೆ ಏಳು ವರ್ಷಗಳ ಹಳಮೆ ಯಿದೆಯೆಂದೂ ಸಂಶಯಿಸಲಾಗುತ್ತಿದೆ. ಅಲ್ಲದೆ ಇದು ಏಳು ವರ್ಷಗಳ ಹಿಂದೆ ಕೊಡಗಿನಿಂದ ಕಾಣೆಯಾದ ವ್ಯಕ್ತಿಯದ್ದಾಗಿರಬಹುದೆಂದು ಅಂದಾಜಿಸಲಾಗಿದೆ. ಪತ್ತೆಹಚ್ಚಲಾದ ತಲೆಬುರುಡೆ ಹಾಗೂ ಮೂಳೆಗಳನ್ನು ರಾಸಾಯನಿಕ ತಪಾಸಣೆಗೆ ಕಳುಹಿಸಲಾಗುವುದೆಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಬಂಗ್ಲೆ ಗುಡ್ಡೆಯಲ್ಲಿ ಶೋಧ ಕಾರ್ಯ ಇನ್ನು ಮುಂದುವರಿಯುತ್ತಿದೆ.
