ಕಾಸರಗೋಡು: ಬ್ರಹ್ಮಶ್ರೀ ನಾರಾ ಯಣಗುರುಗಳ ಸಮಾಧಿ ದಿನವನ್ನು ನಿನ್ನೆ ವಿವಿಧೆಡೆ ಆಚರಿಸಲಾಯಿತು. ಶ್ರೀ ನಾರಾಯಣ ಗುರುಗಳ ಹೆಸರಲ್ಲಿರುವ ಸಂಸ್ಥೆಗಳು ಸಹಿತ ವಿವಿಧ ಸಂಘಟನೆಗಳು ನಡೆಸಿದ ಕಾರ್ಯಕ್ರಮದಲ್ಲಿ ಭಜನೆ, ಸಾಮೂಹಿಕ ಉಪವಾಸ, ಗುರುಅರ್ಚನೆ, ಸಮಾಧಿಪೂಜೆ, ಸಂಸ್ಮರಣೆ ನಡೆಸಲಾಯಿತು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ವಹಿಸಿದರು. ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್ ನೇತೃತ್ವದಲ್ಲಿ ಗುರುಪೂಜೆ, ಪುಷ್ಪಾರ್ಚನೆ, ಸಂಸ್ಮರಣೆ ನಡೆಸಲಾಯಿತು. ಪಿ.ಕೆ. ರಾಜನ್ ಉದ್ಘಾಟಿಸಿದರು.ಯೂನಿಯನ್ ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ಮೋಹನ ಮೀಪುಗುರಿ, ರಾಜೇಶ್, ನಾಗೇಶ್, ವಿಜಯ ಮನ್ನಿಪ್ಪಾಡಿ, ಕೃಷ್ಣ ಕೂಡ್ಲು, ನಾರಾಯಣ, ಕೇಶವ, ಕೃಷ್ಣ, ಜಯಂತ, ಮೋಹಿನಿ, ಸುನಿತ ಮೊದಲಾದವರು ಮಾತನಾಡಿದರು. ನೆಲ್ಲಿಕಟ್ಟೆ, ಮಂಜೇಶ್ವರ, ವೆಳ್ಳರಿಕುಂಡು, ತೀರ್ಥಂಕರ ಮೊದಲಾದೆಡೆಗಳಲ್ಲೂ ಶ್ರೀ ನಾರಾಯಣ ಗುರುಗಳ ಸಮಾಧಿ ದಿನ ಆಚರಿಸಲಾಯಿತು.
