ಅಧಿವೇಶನದಲ್ಲಿ ಭಾಗವಹಿಸದೆ ಇರುವುದು ಮಂಜೇಶ್ವರ ಶಾಸಕರ ಬೇಜವಾಬ್ದಾರಿತನ- ಬಿಜೆಪಿ

ಮೀಂಜ: ಮಂಜೇಶ್ವರ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿ ತನದ ಪರ ಮಾವಧಿ. ಅಭಿವೃದ್ಧಿಯಲ್ಲಿ ಮೂಲ ಭೂತ ಸೌಕರ್ಯದಲ್ಲಿ, ಅತ್ಯಂತ ಹಿಂದುಳಿದ ಪ್ರದೇಶದ ಮಂಜೇಶ್ವರ ವಿಧಾನಸಭಾ ಕೇತ್ರದ ಅಭಿವೃದ್ಧಿಯ ರೂಪುರೇಷೆ ಸಿದ್ದಪಡಿಸಿ ಅಧಿವೇಶನ ದಲ್ಲಿ ಭಾಗವಹಿಸಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇರು ವುದು ಬೇಜವಾಬ್ದಾರಿ, ಮಂಜೇಶ್ವರ ದಲ್ಲಿ ಬಂದು ಕಪಟ ನಾಟಕದ ಹೋ ರಾಟ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾಯವಾದಿ ಸಜೀವನ್ ವಿ.ಕೆ ಅಗ್ರಹಿಸಿದ್ದಾರೆ.
ಬಿಜೆಪಿ ಪೈವಳಿಕೆ, ಮೀಂಜ, ವರ್ಕಾಡಿ ಪಂಚಾಯತ್‌ನ ವಿವಿಧೆಡೆ ಜರಗಿದ ಪಕ್ಷದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಮಾತನಾಡಿ, ಎಡರಂಗ ಸರಕಾರ ರಾಜ್ಯ ದಲ್ಲಿ ಸ್ಥಳೀಯಡಳಿತ ಪಂಚಾಯತ್‌ಗಳಿಗೆ ನೀಡಬೇಕಾದ ಯೋಜನೆಗಳಿಗೆ ಕಡಿವಾಣ ಹಾಕುತ್ತಿದೆ ಇದರಿಂದ ಲೈಫ್ ಯೋಜನೆ, ಟೆಂಡರ್ ಪ್ರಕ್ರಿಯೆಗಳು ಸ್ತಬ್ದ ವಾಗಿದೆ ಸರಕಾರ ಉದ್ದೇಶ ಪೂರ್ವಕವಾಗಿ ಪಂಚಾಯತ್ ಕಾರ್ಯದರ್ಶಿಗಳನ್ನು, ಅಧಿಕಾರಿಗಳನ್ನು ನೇಮಕ ಮಾಡದೇ, ಬ್ಲಾಕ್ ಇಂಜಿನಿಯರ್ ಗಳಿಗೆ ಕಡ್ಡಾಯ ರಜೆ ನೀಡಿ ಯೋಜನೆಗಳು ಜಾರಿ ಆಗದಂತೆ ತಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಕಾರ್ಯದರ್ಶಿ ಲೋಕೇಶ್ ಎನ್, ಮುಖಂಡರಾದ ಎ.ಕೆ ಕಯ್ಯರ್, ಪ್ರಸಾದ್ ರೈ ಭಾಸ್ಕರ್ ಪೊಯ್ಯೇ, ನಾಗೇಶ್ ಬಳ್ಳೂರ್, ತುಳಸಿ ವರ್ಕಾಡಿ, ಪದ್ಮನಾಭ ರೈ, ಬೆಜ್ಜ ಚಂದ್ರಹಾಸ, ಸದಾಶಿವ ಚೇರಾಲ್, ಸುಬ್ರಹ್ಮಣ್ಯ ಭಟ್, ಜಯಶಂಕರ್ ಸತ್ಯ ಶಂಕರ ಆಯಾ ಪಂಚಾಯತ್ ಗಳ ನೇತೃತ್ವ ನೀಡಿದರು. ಕೆ ವಿ ಭಟ್ ಸ್ವಾಗತಿಸಿ ಯತೀರಾಜ್ ಶೆಟ್ಟಿ ವಂದಿಸಿದರು.

You cannot copy contents of this page