ಉಪ್ಪಳ: ಮನೆ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಹಾನಿಗೊಳಿಸಿದ ಘಟನೆ ನಡೆದಿದೆ. ಮಂಜೇಶ್ವರ ಬಪ್ಪಾಯಿ ತೊಟ್ಟಿ ರಸ್ತೆಯ ಇ.ಎಂ. ಸೈನುದ್ದೀನ್‌ರ ಕಾರಿನ ಹಿಂಭಾಗದ ಗಾಜನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಇದರಿಂದ 15 ಸಾವಿರ ರೂ.ಗಳ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಶುಕ್ರವಾರ ರಾತ್ರಿ 11.30ರ ವೇಳೆ ಈ ಘಟನೆ ನಡೆದಿದ್ದು, ಈ ಬಗ್ಗೆ ಸೈನುದ್ದೀನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
