ಮಂಜೇಶ್ವರ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಮಂಜೇಶ್ವರ ಪಾವೂರು ಚೌಕಿಯ ದಿ| ಡ್ಯಾನಿಯಲ್ ಗೋವಿಯಸ್‌ರ ಪುತ್ರ ಪ್ರವೀಣ್ ಗೋವಿಯಸ್ (41) ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನ್‌ಗೆ ಇವರು ಸೀರೆ ಉಪಯೋಗಿಸಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಮನೆಯವರು ಅವರನ್ನು ತೂಮಿನಾಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಾಯಿ ಸ್ಟೆಲ್ಲಾ, ಪತ್ನಿ ಪ್ರಮಿಳಾ, ಪುತ್ರ ಪ್ರವೀಶ್, ಸಹೋದರಿ ಪ್ಲೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
