ಬದಿಯಡ್ಕ: ಅಮ್ಲೆಟ್ ಹಾಗೂ ಬಾಳೆಹಣ್ಣು ಗಂಟಲಲ್ಲಿ ಸಿಲುಕಿ ವೆಲ್ಡಿಂಗ್ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಬದಿಯಡ್ಕ ಬಳಿಯ ಬಾರಡ್ಕ ಚುಳ್ಳಿಕ್ಕಾನ ನಿವಾಸಿ ದಿ| ಪೊಕ್ರಯಿಲ್ ಡಿ’ಸೋಜಾ ಎಂಬವರ ಪುತ್ರ ವಿಸಾಂತಿ ಡಿ’ಸೋಜಾ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 4.30ರ ವೇಳೆ ಘಟನೆ ಸಂಭವಿಸಿದೆ. ಬಾರಡ್ಕದ ಗೂಡಂಗಡಿಯಿಂದ ಇವರು ಅಮ್ಲೆಟ್ ಹಾಗೂ ಬಾಳೆಹಣ್ಣು ಖರೀದಿಸಿ ಸೇವಿಸುತ್ತಿದ್ದಾಗ ಗಂಟಲಲ್ಲಿ ಸಿಲುಕಿದೆಯೆನ್ನಲಾಗುತ್ತಿದೆ. ಉಸಿರಾಟ ತೊಂದರೆ ಎದುರಿಸುತ್ತಿದ್ದ ಇವರನ್ನು ಕಂಡ ಇತರರು ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಆಸ್ಪತ್ರೆಗೆ ತಲುಪಿಸುವ ಮೊದಲೇ ಸಾವುಸಂಭವಿಸಿ ರುವುದಾಗಿ ವೈದ್ಯರು ನಡೆಸಿದ ತಪಾಸಣೆ ವೇಳೆ ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ವಿಸಾಂತಿ ಡಿ’ಸೋಜಾ ಬೇಳ ಕಟ್ಟತ್ತಡ್ಕದಲ್ಲಿರುವ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಹೆಲ್ಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಾಯಿ ಲಿಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.