ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಅವಲೋಕನ ಸಭೆ, ಲಾಂಛನ ಬಿಡುಗಡೆ

ಪೈವಳಿಕೆ : ಪೈವಳಿಕೆ ನಗರ ಸರಕಾರಿ ಉನ್ನತ ಪ್ರೌಢಶಾಲೆಯ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನ ಸಭೆ ಜರಗಿತು. ಪೈವಳಿಕೆ ನಗರ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು ಉದ್ಘಾಟಿಸಿದರು. ವಾರ್ಡು ಪ್ರತಿನಿದಿs ಸುನೀತಾ ವಲ್ಟಿ ಡಿಸೋಜ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಕಲೋತ್ಸವದ ಲಾಂಛsನ ಅನಾವರಣಗೊಳಿಸಿದರು. ಮುಖ್ಯ ಶಿಕ್ಷಕರ ವೇದಿಕೆಯ ಕಾರ್ಯ ದರ್ಶಿ ಶ್ಯಾಮ್ ಭಟ್ ವಿವಿಧ ಸಮಿತಿ ಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕರಾದ ರಾಜೇಶ್ ಪಿ, ಅನೀಶ್, ಜಯಕುಮಾರ್, ಸಂಜೀವ ಸಿ.ಎಚ್, ಗಣೇಶ್, ಶೈಲೇಶ್,ಪ್ರವೀಣ್ ಕೆ, ಮೊಹಮ್ಮದ್ ರಫೀಕ್, ಬಬಿತ ಉಪಸಮಿತಿಗಳ ಕೆಲಸಕಾರ್ಯಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಪೈವಳಿಕೆ ಪಂ.ನ ವಿವಿಧ ವಾರ್ಡ್ಗಳ ಪ್ರತಿನಿಧಿಗಳಾದ ಅಬ್ದುಲ್ಲ ಕೆ, ಜಯಲಕ್ಷ್ಮಿ ಭಟ್, ಮಮತ ಪೂಜಾರಿ, ಪೈವಳಿಕೆ ನಗರ ಶಾಲೆಯ ಎಸ್‌ಎಂಸಿಯ ಅಸೀಸ್ ಕಳಾಯಿ, ಪಿಇಸಿ ಸೆಕ್ರೆಟರಿ ಶಿವರಾಮ್ ಭಟ್ ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಕಲೋತ್ಸವದ ಜನರಲ್ ಕನ್ವೀನರ್ ವಿಶ್ವನಾಥ ಕುಂಬ್ಳೆ ಸ್ವಾಗತಿಸಿ,ಪೈವಳಿಕೆ ನಗರ ಶಾಲೆಯ ಮುಖ್ಯಶಿಕ್ಷಕಿ ವತ್ಸಲ ಜಿ.ಎಸ್ ಧನ್ಯವಾದಗೈದರು.

You cannot copy contents of this page